







ಪುತ್ತೂರು: ಸಂಪ್ಯ ಕಾವೇರಿ ಕಾಂಪ್ಲೆಕ್ಸ್ ನಲ್ಲಿ ಮಯೂರಿ ಆಯುರ್ವೇದಿಕ್ ಕ್ಲಿನಿಕ್ ಶುಭಾರಂಭವು ಏ.30 ರಂದು ಶುಭಾರಂಭಗೊಳ್ಳಲಿದೆ.


ಪುತ್ತೂರು ಆರೋಗ್ಯಾಧಿಕಾರಿ ಡಾ.ದೀಪಕ್ ರೈರವರು ಕ್ಲಿನಿಕ್ ಅನ್ನು ಉದ್ಘಾಟಿಸಲಿದ್ದಾರೆ. ಜಾಲ್ಸೂರ್ ಅನಿಶ ಕ್ಲಿನಿಕ್ ನ ಆಯುರ್ವೇದ ತಜ್ಞ ಡಾ.ಹರಿಪ್ರಸಾದ್ ಕೆ.ಎಸ್ ರವರು ದೀಪ ಪ್ರಜ್ವಲನೆಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್ ವೈದ್ಯರು ಹಾಗೂ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಗೌರವ ಉಪಸ್ಥಿಗಳಾಗಿ ಮಹಾವೀರ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸುರೇಶ್ ಪುತ್ತೂರಾಯ, ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು, ಪುತ್ತೂರು ವಾಣಿಯನ್ ಗಾಣಿಗ ಸಮುದಾಯ ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ, ಸಂಪ್ಯ ಕಾವೇರಿ ಕಾಂಪ್ಲೆಕ್ಸ್ ಮಾಲಕ ಭೀಮಯ್ಯ ಭಟ್, ಮಂಗಳೂರು ಎನ್.ಎಂ.ಪಿ.ಯ ಅಸಿಸ್ಟೆಂಟ್ ಇಂಜಿನಿಯರ್ ಪ್ರಶಾಂತ್ ಕುಮಾರ್, ಪುತ್ತೂರು ಎಚ್. ಇ.ಎಫ್ ಅಧ್ಯಕ್ಷ ಮೋಹನ ಕೆ,ರವರು ಭಾಗವಹಿಸಲಿದ್ದಾರೆ ಎಂದು ಡಾ.ಭವ್ಯ ಮನೋಹರ್ ಹಾಗೂ ಮನೋಹರ್ ಮತ್ತು ಶ್ರೀಮತಿ ಮುಕ್ತಲತಾ ಮಹಾಬಲಡ್ಕ, ಶ್ರೀಮತಿ ಮತ್ತು ಶ್ರೀ ಸುಮತಿ ತಿಮ್ಮಪ್ಪ ಪಾಟಾಳಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













