







ಪುತ್ತೂರು: ಎಸ್ಬಿಐ ಬ್ಯಾಂಕ್ ಪುತ್ತೂರು ಕಛೇರಿಯ ಹಿರಿಯ ಮೆಸೆಂಜರ್ ರುಕ್ಮಯ್ಯ ಗೌಡರವರು ಎ.30ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ.


ನರಿಮೊಗರು ಗ್ರಾಮದ ದಿ| ಸಾಂತಪ್ಪ ಗೌಡ ಮತ್ತು ದಿ| ಸಂಕಮ್ಮ ದಂಪತಿಯ ಪುತ್ರನಾದ ರುಕ್ಮಯ್ಯ ಗೌಡರವರು ಸಂಪ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು 1994ರಲ್ಲಿ ಎಸ್ಬಿಐ ಬ್ಯಾಂಕ್ ಪುತ್ತೂರು ಕಛೇರಿಯಲ್ಲಿ ಮೆಸೆಂಜರ್ ಆಗಿ ಕರ್ತವ್ಯಕ್ಕೆ ಸೇರಿದರು. 15 ವರ್ಷ ಸೇವೆ ಸಲ್ಲಿಸಿ ಬಳಿಕ ಹಿರಿಯ ಮೆಸೆಂಜರ್ ಆಗಿ ಪದೋನ್ನತಿಗೊಂಡರು.



2024ರಲ್ಲಿ ಎಸ್ಬಿಐ ಸುಳ್ಯ ಶಾಖೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಒಟ್ಟು 32 ವರ್ಷಗಳ ಕಾಲ ಸೇವೆ ಸಲ್ಲಿಸಿ ಎ.30ರಂದು ನಿವೃತ್ತಿ ಹೊಂದಲಿದ್ದಾರೆ. ಇವರು ಪತ್ನಿ ಪುಷ್ಪ, ಪುತ್ರ ಸುಜಿತ್ರವರೊಂದಿಗೆ ನರಿಮೊಗರು ಗ್ರಾಮದ ಆನಾಜೆಯಲ್ಲಿ ವಾಸವಾಗಿದ್ದಾರೆ.










