ಕುಂತೂರಿನ ದಯಾನಂದ ಅವರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ

0

ಪೆರಾಬೆ: ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸಾಧಕರಿಗೆ ನೀಡುವ 51ನೇ ವರ್ಷದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ನಾಟಕ ಕಲಾವಿದ, ಕಡಬ ತಾಲೂಕಿನ ಕುಂತೂರು ನಿವಾಸಿ ದಯಾನಂದ ಅವರು ಆಯ್ಕೆಯಾಗಿದ್ದಾರೆ. ಮೇ 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ದಯಾನಂದ ಅವರು 4 ದಶಕಗಳಿಂದ ರಂಗಭೂಮಿಯಲ್ಲಿ ನಟರಾಗಿ ಮಿಂಚುತ್ತಿದ್ದು ಈ ತನಕ ಸುಮಾರು 25೦೦ಕ್ಕಿಂತ ಮಿಕ್ಕಿದ ನಾಟಕಗಳಲ್ಲಿ ಸ್ತ್ರೀ ವೇಷಧಾರಿಯಾಗಿ ಮಿಂಚಿದ್ದಾರೆ. ಇವರು ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಂಸ್ಕೃತಿಕ ಇಲಾಖೆಯಿಂದ ಜಮ್ಮುಕಾಶ್ಮೀರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಭಾಗಹಿಸಿದ್ದರು. ನಾಟಕವೊಂದರಲ್ಲಿ 10 ನಿಮಿಷದಲ್ಲಿ 12 ಸೀರೆಗಳನ್ನು ಬದಲಾಯಿಸಿ ವಿಶೇಷ ನೃತ್ಯ ಮಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಫಿಫ್ಟಿ ಫಿಫ್ಟಿ ಕನ್ನಡ ಹಾಸ್ಯ ಧಾರವಾಹಿ, ಲಕ್ಷ್ಮಣ ಕನ್ನಡ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ. ತುಳುನಾಡ ಅಭಿನೇತ್ರಿ, ನಾಟ್ಯಮಯೂರಿ, ನಾಟಕ ರಂಗದ ಮಿನುಗು ತಾರೆ, ಕಲಾರತ್ನ ಮಣಿ, ರಂಗಭೂಮಿ ಕಲಾ ಸೇವಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನ ಪಡೆದುಕೊಂಡಿರುವ ಇವರಿಗೆ ಕರ್ನಾಟಕ ಸರಕಾರದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ. ದಯಾನಂದ ಅವರು ಕುಂತೂರು ನಿವಾಸಿ ಶೀನಪ್ಪ ಪೂಜಾರಿ ಅಲೆಕ್ಕಾಡಿ ಹಾಗೂ ಹೇಮಾವತಿ ಅಗತ್ತಾಡಿ ಅವರ ಪುತ್ರ.

LEAVE A REPLY

Please enter your comment!
Please enter your name here