ಪಿಯುಸಿ ಮರುಮೌಲ್ಯಮಾಪನದಲ್ಲಿ 9 ಅಂಕ – ನೆಲ್ಯಾಡಿ ಪ.ಪೂ.ಕಾಲೇಜಿನ ಆಯಿಷತ್ ಫಾಹಿಮಾ ಕಾಲೇಜಿಗೆ ಟಾಪರ್

0

ನೆಲ್ಯಾಡಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆಯಿಷತ್ ಫಾಹಿಮಾ ಅವರಿಗೆ ಒಟ್ಟು 9 ಅಂಕಗಳು ಲಭಿಸಿದೆ. ಈ ಮೂಲಕ ಆಯಿಷತ್ ಫಾಹಿಮಾ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಇಂಗ್ಲಿಷ್‌ನಲ್ಲಿ ಆರಂಭದಲ್ಲಿ 89 ಅಂಕ ಪಡೆದುಕೊಂಡಿದ್ದ ಇವರಿಗೆ ಮರು ಮೌಲ್ಯಮಾಪನದಲ್ಲಿ 3 ಅಂಕ ಲಭಿಸಿದ್ದು ಒಟ್ಟು ಅಂಕ ಗಳಿಕೆ 92ಕ್ಕೆ ಏರಿಕೆಯಾಗಿದೆ. ಬಿಸಿನೆಟ್ ಸ್ಟಡೀಸ್‌ನಲ್ಲಿ 5 ಅಂಕ ಲಭಿಸಿದ್ದು 100ಕ್ಕೆ ಏರಿಕೆಯಾಗಿದೆ. ಅಕೌಂಟೆನ್ಸಿಯಲ್ಲಿ ಸಿಕ್ಕಿದ್ದ 98 ಅಂಕ ಮರು ಮೌಲ್ಯಮಾಪನದಲ್ಲಿ 99ಕ್ಕೆ ಏರಿಕೆಯಾಗಿದೆ. ಮರು ಮೌಲ್ಯಮಾಪನದಲ್ಲಿ ಇವರಿಗೆ ಒಟ್ಟು 9 ಅಂಕ ಲಭಿಸಿದ್ದು ಒಟ್ಟು ಅಂಕ ಗಳಿಕೆ 577ರಿಂದ 586ಕ್ಕೆ ಏರಿಕೆಯಾಗಿದೆ. ಈ ಮೂಲಕ ಇವರು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈಕೆ ನೆಲ್ಯಾಡಿ ನಿವಾಸಿ, ನೋಟರಿ ನ್ಯಾಯವಾದಿ ಇಸ್ಮಾಯಿಲ್ ಹಾಗೂ ಮಾಜಿದಾ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here