ನೆಲ್ಯಾಡಿ ಜೆಸಿ ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಸನ್ಮಾನ

0

ನೆಲ್ಯಾಡಿ: ಕಾರ್ಮಿಕ ದಿನಾಚರಣೆಯ ಅಂಗವಾಗಿ ನೆಲ್ಯಾಡಿ ಜೆಸಿ ವತಿಯಿಂದ ಕಟ್ಟಡ ಕಾರ್ಮಿಕರಾದ ಪುರುಷೋತ್ತಮ ಶೆಟ್ಟಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.


ಕೊಲ್ಯೊಟ್ಟು ನಿವಾಸಿಯಾಗಿರುವ ಪುರುಷೋತ್ತಮ ಶೆಟ್ಟಿ ಅವರು ನೆಲ್ಯಾಡಿ ರಂಗಭಾರತಿ ಶಾಲೆಯಲ್ಲಿ 7ನೇ ತರಗತಿವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಬಳಿಕ ಕಟ್ಟಡ ನಿರ್ಮಾಣ (ಮೇಸ್ತ್ರಿ) ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಕಳೆದ 29 ವರ್ಷಗಳಿಂದ ಮನೆ ನಿರ್ಮಾಣ, ದೈವ-ದೇವರ ಗುಡಿ ಗೋಪುರ, ಭಜನಾ ಮಂದಿರಗಳ ನಿರ್ಮಾಣ ಸೇರಿದಂತೆ ಸಿಮೆಂಟ್ ಡಿಸೈನ್ ಕೆಲಸಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಅವರ ಪರಿಶ್ರಮ, ನಿಷ್ಠೆ ಹಾಗೂ ಸಮಾಜದ ಅಭಿವೃದ್ಧಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

LEAVE A REPLY

Please enter your comment!
Please enter your name here