ಇನ್ಫೋಸಿಸ್ ಸಹಸಂಸ್ಥಾಪಕಿ ಸುಧಾಮೂರ್ತಿ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಗೆ ಭೇಟಿ

1

ಪುತ್ತೂರು: ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕಿ ಸುಧಾಮೂರ್ತಿ ಅವರು ಇಂದು ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಗೆ ಭೇಟಿ ನೀಡಿ, ಉತ್ಪಾದನಾ ಪ್ರಕ್ರಿಯೆಯನ್ನು ವೀಕ್ಷಿಸಿದರು.

ನೆಹರುನಗರದ ಡಾ. ರವಿನಾರಾಯಣ ಅವರ ಸಹೋದರ, NMPTಯಲ್ಲಿ ಸೀನಿಯರ್ ಡೆಪ್ಯುಟಿ ಡೈರೆಕ್ಟರ್ ಆಗಿರುವ ಡಾ. ಪ್ರಥ್ವಿರಾವ್ ಅವರು ಸುಧಾಮೂರ್ತಿ ಅವರನ್ನು ಕ್ಯಾಂಪ್ಕೋ ಫ್ಯಾಕ್ಟರಿಗೆ ಕರೆತಂದರು.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಕಲ್ಲಡ್ಕ ಪ್ರಭಾಕರ ಭಟ್, ಕೆದಿಲ ರಾಘವೇಂದ್ರ ಭಟ್ ಸೇರಿದಂತೆ ಸಂಸ್ಥೆಯ ಹಲವು ಪ್ರಮುಖರು ಉಪಸ್ಥಿತರಿದ್ದರು. ಸುಧಾಮೂರ್ತಿ ಅವರು ಚಾಕಲೇಟ್ ತಯಾರಿಕೆಯ ಹಂತಗಳನ್ನು ವೀಕ್ಷಿಸಿ, ಕ್ಯಾಂಪ್ಕೋದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

1 COMMENT

LEAVE A REPLY

Please enter your comment!
Please enter your name here