






ಆಲಂಕಾರು; ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಶರವೂರು ಇದರ ನೇಮೋತ್ಸವ ಮೇ.3 ಮತ್ತು ಮೆ.4 ರಂದು ನಡೆಯಿತು.




ಮೇ.3 ರಂದು ಮಧ್ಯಾಹ್ನ ಶ್ರೀ ಮೊಗೇರ್ಕಳ ದೈವಗಳಿಗೆ ಮಂಜ ಸೇವೆ,ಸಂಜೆ ದೈವಗಳ ಭಂಡಾರ ತೆಗೆದು,ಸಂಜೆ ಬಿರ್ಮೆರೆ ಪೂಜೆ ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಿತು.
ನಂತರ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿದು ತನ್ನಿ ಮಾನಿಗ ದೈವ ಗರಡಿ ಇಳಿದು ದೈವ ಪಾತ್ರಿಗಳ ದರ್ಶನ ನಡೆದು ಶ್ರೀ ಮೊಗೇರ್ಕಳ ದೈವಗಳ ನೇಮೋತ್ಸವ ನಡೆಯಿತು.




ಮೇ.4 ರಂದು ಬೆಳಿಗ್ಗೆ ಕೊರಗ ತನಿಯ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.ಆಗಮಿಸಿದ ಭಕ್ತಾಧಿಗಳು ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.ಈ ಸಂಧರ್ಭದಲ್ಲಿ ಸುಬ್ರಹ್ಮಣ್ಯ ರಾವ್ ನಗ್ರಿ ಅಧ್ಯಕ್ಷರು ಮತ್ತು ಸದಸ್ಯರು ವ್ಯವಸ್ಥಾಪನ ಸಮಿತಿ, ಯಂ. ಗೋಪಾಲಕೃಷ್ಣ ಪಡ್ಡಿಲ್ಲಾಯ ಅಧ್ಯಕ್ಷರು ಮತ್ತು ಸದಸ್ಯರು
ಬ್ರಹ್ಮಕಲಶೋತ್ಸವ ಸಮಿತಿ, ಡಾ| ಹೇಮಂತ್ ರೈ ಮನವಳಿಕೆಗುತ್ತು ಅಧ್ಯಕ್ಷರು ಮತ್ತು ಸದಸ್ಯರು ಅಭಿವೃದ್ಧಿ ಸಮಿತಿ, ಎನ್. ಹರೀಶ್ ಆಚಾರ್ಯ ನಗ್ರಿಗುತ್ತು ಪವಿತ್ರಪಾಣಿ ,
ಅರ್ಚಕರು ಮತ್ತು ಸಿಬ್ಬಂದಿವರ್ಗ,ಸೀಮೆಯ ಹತ್ತು ಸಮಸ್ತರು,ಕಾರ್ಯಕರ್ತರು, ಕುಂಞ ಮುಗೇರ ಕಮ್ಮಿತ್ತಿಲು ಗೌರವಾಧ್ಯಕ್ಷರು, ಮಾಯಿಲಪ್ಪ ಮುಗೇರ ಪಾಂಜೋಡಿ ಅಧ್ಯಕ್ಷರು,ತಿಮ್ಮಪ್ಪ ಮುಗೇರ ಪಾಂಜೋಡಿ ಕಾರ್ಯಾಧ್ಯಕ್ಷರು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ನೇಮೋತ್ಸವ ಸಮಿತಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಶರವೂರು ರವರು ನೇಮೋತ್ಸವ ದಲ್ಲಿ ಸಹಕರಿಸಿದರು.










