






ಪುತ್ತೂರು : ಪಾದರಕ್ಷೆಗಳ ತಯಾರಿಕೆಯ ಜೊತೆಗೆ ಮಾರಾಟದಲ್ಲೂ ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವ ಜಗತ್ತಿನ ಹೆಸರಾಂತ ಸಂಸ್ಥೆ ಬಾಟಾ ಇದರ ಪುತ್ತೂರು ಪ್ರಾಂಚೈಸಿಗೆ ಮೂರನೇ ಬಾರಿಗೆ ಸೌತ್ ಇಂಡಿಯಾ ಬೆಸ್ಟ್ ಪ್ರಾಂಚೈಸಿ ಅವಾರ್ಡ್ ಲಭಿಸಿದೆ.


ಇತ್ತೀಚೆಗೆ ಬೆಂಗಳೂರಿನ ಮಾನ್ಯತ ಟೆಕ್ ಪಾರ್ಕ್ ನ ಹೊಟೇಲ್ ಹಿಲ್ಟನ್ನಲ್ಲಿ ನಡೆದ ತಮಿಳುನಾಡು , ಆಂಧ್ರಪ್ರದೇಶ ,ಕೇರಳ ಮತ್ತು ಕರ್ನಾಟಕ ವಲಯದ ಬಾಟಾ ಸೌತ್ ಇಂಡಿಯಾ ಬ್ಯುಸಿನೆಸ್ ಮೀಟಿಂಗ್ನಲ್ಲಿ ಪುತ್ತೂರಿನ ಬಾಟಾ ಶೋರೂಂ ಮಳಿಗೆಗೆ 2025-26ನೇ ಸಾಲಿನ ಸೌತ್ ಇಂಡಿಯಾ ಬೆಸ್ಟ್ ಪ್ರಾಂಚೈಸಿ ಅವಾರ್ಡ್ ಹಾಗೂ ಬೆಸ್ಟ್ ಬ್ಯುಸಿನೆಸ್ ಪಾರ್ಟ್ನರ್ ಎರಡು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.



ಕಳೆದ 5 ವರ್ಷದಲ್ಲಿ ಪುತ್ತೂರಿನ ಬಾಟಾ ಶೋರೂಂ ಒಟ್ಟು 3 ಬಾರಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪ್ರಶಸ್ತಿಯನ್ನು ಪ್ರಾಂಚೈಸಿ ಮಾಲಕಿ ಸೌಮ್ಯ ಪ್ರಸನ್ನ ಕುಮಾರ್ ಪರವಾಗಿ ಪ್ರಾಂಚೈಸಿಯ ಪ್ರತಿನಿಧಿಗಳು ಬಾಟಾ ಕಂಪೆನಿಯ ಬ್ಯುಸಿನೆಸ್ ಹೆಡ್ ಪ್ರಸಾದ್ ಬಾವೆ ಅವರಿಂದ ಸ್ವೀಕರಿಸಿದರು. ಸೌಮ್ಯ ಪ್ರಸನ್ನ ಇವರ ಇನ್ನೊಂದು ಪ್ರಾಂಚೈಸಿ ಮಡಿಕೇರಿಯಲ್ಲೂ ಕೂಡ ಕಾರ್ಯನಿರ್ವಹಿಸುತ್ತಿದೆ.










