ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯಿಂದ 28ನೇ ವರ್ಷದ ವಾರ್ಷಿಕೋತ್ಸವ

0

ಪುತ್ತೂರು: ತಾಲೂಕಿನ ಬಜತ್ತೂರು ಗ್ರಾಮದಲ್ಲಿರುವ ಗ್ರಾಮದೇವರಾದ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾಂಚನ – ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ 28ನೇ ವರ್ಷದ ಭಕ್ತಿಯುತ ಸಂಭ್ರಮದ ವಾರ್ಷಿಕೋತ್ಸವವು ಶ್ರೀ ದೇವಸ್ಥಾನದ ಟ್ರಸ್ಟ್ ಮಾರ್ಗದರ್ಶನದಲ್ಲಿ ನೆರವೇರಿತು.

ಸಾಮೂಹಿಕ ಸತ್ಯನಾರಾಯಣ ಪೂಜೆ, ಶ್ರೀದೇವರಿಗೆ ರಂಗಪೂಜೆ, ಗಣಪತಿ ದೇವರಿಗೆ ಸೇವೆ, ಪಂಜುರ್ಳಿ ದೈವದ ತಂಬಿಲಗಳು ನೆರವೇರಿ, ಅನ್ನಸಂತರ್ಪಣೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮಗಳು ಭಜನಾ ಮಂಡಳಿಗಳಿಂದ ಜರುಗಿದವು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ನಾರಾಯಣ ಬಡಿಕ್ಕಿಲ್ಲಾಯ, ಸಹ ಅರ್ಚಕ ರಾಜಗೋಪಾಲ ಕೆದ್ಲಾಯ ಮತ್ತು ಈಶ್ವರ ಭಟ್ ಅವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ಅನೇಕ ಭಕ್ತರುಗಳಿಂದ ಶ್ರೀ ದೇವರಿಗೆ ವಿಷ್ಣು ಸಹಸ್ರನಾಮದ ಪಾರಾಯಣವೂ ನಡೆಯಿತು.

ಅರ್ಧ ಏಕಾಹ ಭಜನಾ ಕಾರ್ಯಕ್ರಮದ ಆಯೋಜಕರಾದ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾಮಂಡಳಿಯೊಂದಿಗೆ ಕಾಂಚನ – ನಡ್ಪ ಶ್ರೀ ವಿಷ್ಣುಮೂರ್ತಿ ಮಹಿಳಾ ಸಂಕೀರ್ತನ ಮಂಡಳಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪೆರಿಯಡ್ಕ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ತಿರ್ಲೆ, ಶ್ರೀ ರಾಮ ಭಜನಾ ಮಂಡಳಿ ಅಯೋಧ್ಯಾನಗರ, ಪೊರೋಳಿ ತಂಡಗಳು ಕುಣಿತ ಭಜನೆಯ ಮೂಲಕ ಸೇವೆ ಸಲ್ಲಿಸಿದರು.ಜೊತೆಗೆ ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಅಗ್ಪಲ-ಕಕ್ಯಪದವು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆಲತ್ತಿಮಾರು, ಮತ್ತು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಮುದ್ಯ ತಂಡಗಳಿಂದ ಸುಮಾರು 130 ಭಜಕರು ಸೇರಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನಿರಂತರವಾಗಿ ಅರ್ಧ ಏಕಾಹ ಭಜನೆಯನ್ನು ನಡೆಸಿಕೊಟ್ಟು ದೇವತಾನುಗ್ರಹವನ್ನು ಪಡೆದರು.

ಈ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಭಜನಾ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಕೇಶವ ಗೌಡ ಅಗರ್ತಿಮಾರು ಹಾಗೂ ಕಾರ್ಯದರ್ಶಿ ಉಮೇಶ್ ಗೌಡ ನೆಕ್ಕರೆರನ್ನು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಶ್ರೀಧರ್ ಗೌಡ ನಡ್ಪ ಮತ್ತು ಉಪಾಧ್ಯಕ್ಷರಾದ ಶಿವರಾಮ ಕಾರಂತ ಉರಾಬೆ ಸನ್ಮಾನಿಸಿದರು.

ಆಡಳಿತ ಮೊಕ್ತೇಸರರಾದ ವೇದಮೂರ್ತಿ ನಾರಾಯಣ ಬಡಿಕ್ಕಿಲ್ಲಾಯ, ದೇವಸ್ಥಾನದ ಟ್ರಸ್ಟಿಗಳಾದ ದುಗ್ಗಪ್ಪ ಗೌಡ, ಲೋಕೇಶ್ ಗೌಡ, ಕುಶಾಲಪ್ಪ ಗೌಡ, ಸುಮನ ಬಡಿಕ್ಕಿಲ್ಲಾಯ, ಜಗದೀಶ ರಾವ್, ಸುಧಾಕೃಷ್ಣ, ಸುರೇಶ್ ಬಿದಿರಾಡಿ, ಎಲ್ಯಣ್ಣ ಗೌಡ, ಹಾಗೂ ಉಪಟ್ರಸ್ಟಿಗಳಾದ ಪ್ರಸನ್ನ ಉರಾಬೆ, ನೋಣಯ್ಯ ಗೌಡ, ಸುಮನ್ ಬಜತ್ತೂರು, ರವೀಂದ್ರ ಒರೊಂಬೋಡಿ, ಯಾದವ ಗೌಡ, ಶಿವರಾಮ್ ಪ್ರಸಾದ್ ಬಜತ್ತೂರು, ದಿನೇಶ್ ನಡ್ಪ, ಸುನೀತಾ ಮುಕುಂದ – ಇವರುಗಳೂ, ಭಜನಾ ಮಂಡಳಿಯ ಅಧ್ಯಕ್ಷರಾದ ಬಾಲಕೃಷ್ಣ ಹೊಸಮನೆ, ಕಾರ್ಯದರ್ಶಿ ದಯಾನಂದ ಅಗರ್ತಿಮಾರು, ಕೋಶಾಧಿಕಾರಿ ಅಕ್ಷಯ್ ಗೌಡತ್ತಿಗೆ, ಕಿಶನ್ ನೆಕ್ಕರೆ, ಭದ್ರಪ್ಪಗೌಡ, ಮುಕುಂದ ಗೌಡ ಬಜತ್ತೂರು ಸೇರಿದಂತೆ 400 ಮಿಕ್ಕಿ ಭಕ್ತಾದಿಗಳು ಉಪಸ್ಥಿತರಿದ್ದರು. ಭಜಕರಿಗೆ ರಾತ್ರಿಯಿಡೀ ಫಲಹಾರದ ವ್ಯವಸ್ಥೆ ನಿರಂತರವಾಗಿ ನಡೆಯಿತು. ಉಪನ್ಯಾಸಕ
ಮೋಹನ್ ಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here