






ನೆಲ್ಯಾಡಿ: ಕೊಕ್ಕಡ ಜೋಡುಮಾರ್ಗದ ಬಳಿ ನಿಲ್ಲಿಸಿದ್ದ ಬೈಕ್ ಕಳವುಗೊಂಡಿರುವ ಘಟನೆ ಮೇ.6ರಂದು ಬೆಳಗ್ಗೆ ನಡೆದಿದೆ.
ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಸಂಗಮ್ ಕೊಕ್ಕಡ ನಿವಾಸಿ ಕೆ.ರಾಜೇಂದ್ರ ಅವರು ಮೇ.6ರಂದು ಬೆಳಗ್ಗೆ 4.15ಕ್ಕೆ ತಮ್ಮ ಬೈಕ್(ಕೆಎ 21, ಎಲ್ 0081) ಅನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೊಕ್ಕಡ ಜೋಡು ಮಾರ್ಗದ ಬಳಿ ನಿಲ್ಲಿಸಿ ಸುಬ್ರಹ್ಮಣ್ಯಕ್ಕೆ ಹೋಗಿದ್ದು, ಬೆಳಗ್ಗೆ 11 ಗಂಟೆಗೆ ವಾಪಸು ಬಂದಾಗ ಬೈಕ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು ಕಳವು ಆಗಿರುವುದು ಬೆಳಕಿಗೆ ಬಂದಿದೆ. ಕಳವು ಆದ ಬೈಕ್‌ನ ಮೌಲ್ಯ 10 ಸಾವಿರ ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೆ.ರಾಜೇಂದ್ರ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.












