






ಪುತ್ತೂರು: ಕಾರಿನ ಹಿಂಬದಿಗೆ ಮಾರುತಿ ಇಕೋ ಕಾರೊಂದು ಡಿಕ್ಕಿಯಾದ ಪರಿಣಾಮ ಕಾರು ಮುಂದಕ್ಕೆ ಚಲಿಸಿದ್ದು, ಇದೇ ವೇಳೆ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಬೈಕ್ ಕಾರಿನ ಹಿಂಬದಿಗೆ ಡಿಕ್ಕಿಯಾದ ಘಟನೆ ಕೆಮ್ಮಾಯಿ ಸಮೀಪ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರರು ಗಾಯಗೊಂಡಿದ್ದು, ಅಪಘಾತಕ್ಕೆ ಕಾರಣವಾದ ಇಕೋ ಕಾರು ಪರಾರಿಯಾಗಿರುವುದಾಗಿ ವರದಿಯಾಗಿದೆ.


ಕಾರು ಚಾಲಕ ಶಿವಮೊಗ್ಗ ಹೊಸನಗರದ ಅನಂತ ಎಸ್.ಕೆ. ದೂರುದಾರರು ಅವರು ಪುತ್ತೂರಿನಿಂದ ಉಪ್ಪಿನಂಗಡಿ ಕಡೆ ಹೋಗುತ್ತಿದ್ದವರು ಕೆಮ್ಮಾಯಿ ಬಳಿ ಕಾರನ್ನು ಬಲ ಭಾಗಕ್ಕೆ ತಿರುಗಿಸಲು ನಿಧಾನವಾಗಿ ಚಲಾಯಿಸಿದಾಗ ಹಿಂದಿನಿಂದ ಬಂದ ಮಾರುತಿ ಇಕೋ ವ್ಯಾನ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ಒಮ್ಮೆಲೆ ಮುಂದಕ್ಕೆ ಚಲಿಸಿದ್ದು ಇದೇ ವೇಳೆ ಉಪ್ಪಿನಂಗಡಿ ಕಡೆಯಿಂದ ಪುತ್ತೂರಿಗೆ ನಾರಾಯಣ ಭಟ್ ಎಂಬವರು ಸತ್ಯನಾರಾಯಣ ಪ್ರಕಾಶ ಭಟ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬರುತ್ತಿದ್ದ ಬೈಕ್ ಕಾರಿಗೆ ಹಿಂದಿನಿಂದ ಡಿಕ್ಕಿಯಾಗಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಗಾಯಗೊಂಡಿದ್ದು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಪಘಾತವೆಸಗಿದ ಇಕೋ ಚಾಲಕ ಗಾಯಾಳುವನ್ನು ಆಸ್ಪತ್ರೆಗೂ ಸೇರಿಸದೇ ಹತ್ತಿರದ ಪೊಲೀಸ್ ಠಾಣೆಗೂ ಮಾಹಿತಿ ನೀಡದೇ ಪರಾರಿಯಾಗಿರುವುದಾಗಿ ವರದಿಯಾಗಿದೆ. ಈ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













