ಅಂತರ್ ಜಿಲ್ಲಾ ಮಟ್ಟದ ಭಜನೆ : ಚಾರ್ವಾಕ ತಂಡ ತೃತೀಯ

0

ಪುತ್ತೂರು: ಶ್ರೀ ಕಟೀಲು ಪ್ರತಿಷ್ಠಾನ ಕಟೀಲು ವತಿಯಿಂದ ಶ್ರೀ ಸರಸ್ವತಿ ಸದನ ಕಟೀಲು ಇಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಕುಟುಂಬ ಭಜನಾ ಸ್ಪರ್ಧೆಯಲ್ಲಿ ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಾಕ ತಂಡವು ತೃತೀಯ ಸ್ಥಾನ ಪಡೆದುಕೊಂಡಿತು.

ಶ್ರೀ ಕಟೀಲು ಪ್ರತಿಷ್ಠಾನ ಕಟೀಲು ಇದರ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡಾರವರು ಶಾಶ್ವತ ಫಲಕ ಮತ್ತು ನಗದು ಬಹುಮಾನ ವಿತರಿಸಿದರು.

ಕಾಣಿಯೂರು ಮಠದ ಶ್ರೀ ‌ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕಟೀಲು ಕ್ಷೇತ್ರದ ತಂತ್ರಿ ವೇದವ್ಯಾಸ ತಂತ್ರಿ ವಾಸುದೇವ ಆಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಜಯಂತ್ ವೈ ನೇತೃತ್ವದ ಈ ತಂಡದಲ್ಲಿ ಯಶೋದಾ ಎ ಶಿವಜಿತ್ ವೈ ಜೆ ಮತ್ತು ಸಾಕ್ಷಾತ್ ವೈ ಜೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here