







ಬಡಗನ್ನೂರುಃ ಪಡುಮಲೆ ಎರುಕೊಟ್ಯದ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನದಲ್ಲಿ ವಿಷು ಸಂಕ್ರಮಣ ಅಂಗವಾಗಿ ಮೇ.15ರಂದು ನಾಗ ದೇವರಿಗೆ ಹಾಗೂ ನಾಗಬೆರ್ಮರಿಗೆ ತಂಬಿಲ ಸೇವೆ ಮತ್ತು ದೇವಿ ಸ್ವರೂಪಿಣಿ ತಾಯಿ ದೇಯಿ ಬೈದೆತಿಗೆ ವಿಶೇಷ ಪೂಜೆ ನಡೆಯಲಿದೆ. ಭಕ್ತಾದಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.












