ಯಾವ ಮಗುವೂ ಶಿಕ್ಷಣದಿಂದ ಹೊರಗುಳಿಯಬಾರೆಂಬ ಗುರಿ ; ಪುತ್ತೂರು ತಾಲೂಕು ಮಟ್ಟದ ದಾಖಲಾತಿ ಆಂದೋಲನ -ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್ ಸಿ

0

ಪುತ್ತೂರು: ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸುವ ಜತೆಗೆ ಯಾವ ಮಗುವೂ ಶಿಕ್ಷಣದಿಂದ ಹೊರಗುಳಿಯಬಾರದು ಎಂಬ ಗುರಿಯನ್ನು ಇಟ್ಟುಕೊಂಡು ಪುತ್ತೂರು ತಾಲೂಕು ಮಟ್ಟದ ದಾಖಲಾತಿ ಆಂದೋಲನ 2026-27 ಹಮ್ಮಿಕೊಳ್ಳಲಾಗಿದೆ. ಜೂ.30ವರೆಗೆ ಅಭಿಯಾನ ನಡೆಯಲಿದ್ದು, ಮೇ.15ರಂದು ಬೆಳಗ್ಗೆ ತಾಲೂಕು ಆಡಳಿತ ಮುಂಭಾಗ ಚಾಲನೆ ನೀಡಲಾಗುವುದು ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್ ಸಿ. ಹೇಳಿದರು.


ವಿದ್ಯಾರ್ಥಿ ಪ್ರಗತಿಯನ್ನು ಪ್ರತಿ ಹಂತದಲ್ಲಿ ಖಚಿತ ಪಡಿಸಿಕೊಳ್ಳಲಾಗುತ್ತದೆ. ದ್ವಿಭಾಷಾ ಮಾಧ್ಯಮದಲ್ಲಿ ಭೋಧನೆ ಪ್ರಾರಂಭವಾಗಿರುವುದರಿAದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇಕೋ ಕ್ಲಬ್ ಮೂಲಕ ಪರಿಸರ ಸಂರಕ್ಷಣೆಯ ಕಾರ್ಯ ನಡೆಸಲಾಗುತ್ತದೆ. ಸಂಭ್ರಮ ಶನಿವಾರ, ಓದು ಆಂದೋಲನ, ಸ್ವಚ್ಛತಾ ಪಕ್ವಾಡ, ಚೇತನ ಚಟುವಟಿಕೆ ಸೇರಿ ವಿವಿಧ ಸವಲತ್ತುಗಳನ್ನು ನೀಡಲಾಗುತ್ತದೆ. ಸರ್ಕಾರಿ ಶಾಲೆ ಕಲಿಕೆಯಲ್ಲಿ ಹಿಂದುಳಿದಿಲ್ಲ ಎಂಬುದಕ್ಕೆ ಹತ್ತನೇ ತರಗತಿ ಸಾಕ್ಷಿಯಾಗಿದೆ. ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಶೇ.96ಫಲಿತಾಂಶ ದಾಖಲಾಗಿದೆ. ಒಟ್ಟು 23 ಶಾಲೆಗಳ ಪೈಕಿ 14ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಸವಣೂರು, ಕೆಯ್ಯೂರು ಶಾಲೆ ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ಎಲ್ ಕೆ ಜಿ, ಯು ಕೆ ಜಿ ತರಗತಿಗಳನ್ನೂ ಪ್ರಾರಂಭ ಮಾಡಲಾಗುತ್ತಿದೆ. ಕೆಪಿಎಸ್ ಸಿ 2 ಹಾಗೂ ಪಿಎಂಶ್ರೀ 3 ಶಾಲೆಗಳಿದ್ದು ಇಲ್ಲಿ ನೂರಕ್ಕೆ ನೂರು ಶಿಕ್ಷಕರಿರುತ್ತಾರೆ ಎಂದವರು ಹೇಳಿದರು.


ಶಾಲೆಗಳ ದುರಸ್ಥಿಗೆ ಕ್ರಿಯಾಯೋಜನೆ
ಕೆಲವೊಂದು ಶಾಲೆಗಳ ದುರಸ್ಥಿ ಕಾರ್ಯ ನಡೆಯಲಿದೆ. ಈ ಕುರಿತು ಈಗಾಗಲೇ ಕ್ರಿಯಾಯೋಜನೆ ಆಗಿ ಅನುಮೋದನೆ ದೊರೆತಿದೆ. ರೂ. 90ಲಕ್ಷದ ಕ್ರೀಯಾಯೋಜನೆ ಆಗಿದೆ. ಅದೇ ರೀತಿ ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ಅತಿಥಿ ಶಿಕ್ಷಕರ ಮೂಲಕ ನಿಭಾಯಿಸಲಾಗುವುದು. ಜೂನ್ ಪ್ರಾರಂಭದಿAದಲೇ ಶಿಕ್ಷಕರಿರಲಿದ್ದಾರೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ದೈಹಿಕ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಸ್ಟೀಪನ್ ವೇಗಸ್, ಸಮನ್ವಯಾಧಿಕಾರಿ ಹರಿಪ್ರಸಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here