






ಪುತ್ತೂರು: ಸಮಾಜದಲ್ಲಿ ರೋಗಿಗಳು, ಅಶಕ್ತರು, ವಿಕಲಚೇತನರ ಸೇವೆಯಲ್ಲಿ ತೊಡಗಿರುವ ಸಮಾಜ ಸೇವಕರನ್ನು ಗುರುತಿಸಿ ಜನಪ್ರಿಯ ಆಸ್ಪತ್ರೆ ನೀಡುವ ‘ಜನಪ್ರಿಯ ಸೇವಾ ಸಿರಿ’ ಪ್ರಶಸ್ತಿಗೆ ರೋ. ಪಿ.ವಿ. ಸುಬ್ರಮಣಿ ಅವರು ಆಯ್ಕೆಯಾಗಿದ್ದಾರೆ.


ವೆನ್ಲಾಕ್ ಆಸ್ಪತ್ರೆಯಲ್ಲಿ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಪಿ.ವಿ. ಸುಬ್ರಮಣಿ ಅವರು, ದ.ಕ. ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೋಟರಿ ಕ್ಲಬ್ ಮೂಲಕ ವಿಕಲಚೇತನರು, ರೋಗಿಗಳು, ಅಶಕ್ತರಿಗೆ ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ವಿಕಲಚೇತನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯದಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ.



ಮೂಲತಃ ಸಂಪಾಜೆ ಗ್ರಾಮದ ನೆಲ್ಲಿಕುಮೇರಿಯವರಾದ ರೋ. ಪಿ.ವಿ. ಸುಬ್ರಮಣಿ , ಪ್ರಸ್ತುತ ಪುತ್ತೂರಿನಲ್ಲಿ ಎಂ.ವಿ. ಗ್ರೂಪ್ಸ್ ಸಂಸ್ಥಾಪಕರಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ‘ಜನಪ್ರಿಯ ಸೇವಾ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.










