ಪುತ್ತೂರು ಸಾಮಾಜಿಕ ಅರಣ್ಯ ವಲಯದಿಂದ ರೈತರಿಗೆ, ಸಾರ್ವಜನಿಕರಿಗೆ ಹಣ್ಣು ಹಂಪಲು ಜಾತಿಯ ಸಸಿಗಳು ಲಭ್ಯ

0

ಪುತ್ತೂರು: ಪುತ್ತೂರು ಸಾಮಾಜಿಕ ಅರಣ್ಯ ವಲಯ ವತಿಯಿಂದ 2026-27ನೇ ಸಾಲಿನಲ್ಲಿ ರೈತರ ಜಮೀನುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೆಡಲು ಸಸಿಗಳು ಲಭ್ಯವಿದೆ.


2026-27ನೇ ಸಾಲಿನ ಮಳೆಗಾಲದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕು ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೆಡಲು ವಿವಿಧ ಅರಣ್ಯ ಜಾತಿಯ ಹಾಗೂ ಹಣ್ಣು ಹಂಪಲು ಜಾತಿಯ ಸಸಿಗಳಾದ ಸಾಗುವಾನಿ, ಮಹಾಗನಿ, ನೇರಳೆ, ಹೆಬ್ಬಲಸು, ಹಲಸು, ಪುನರ್ಪುಳಿ, ನೆಲ್ಲಿ, ಶ್ರೀಗಂಧ, ಬೇಂಗ, ಹೊಳೆದಾಸವಾಳ, ಕಾಯಿದೂಪ, ಬಸವನಪಾದ, ಪನ್ನೇರಳೆ, ರಕ್ತಚಂದನ, ಕಿರಾಲ್ ಬೋಗಿ, ಕಹಿಬೇವು, ದಾಲ್ಚೀನಿ ಕಾಡುಮಾವು, ರಾಂಪತ್ರೆ, ಬಿಲ್ವಪತ್ರೆ, ಸಂಪಿಗೆ, ಜಂಬುನೇರಳೆ, ಹುಣಸೆ, ಮಂತುಹುಳಿ, ಸೀತಾಫಲ, ಬಾದಾಮಿ ಬಿಲ್ವಪತ್ರೆ, ಇತ್ಯಾದಿ ಸಸಿಗಳನ್ನು ವಿವಿಧ ಅಳತೆಯ ಪಾಲಿತೀನ್ ಚೀಲಗಳಲ್ಲಿ ಬೆಳೆಸಲಾಗಿದ್ದು, ಮುಕ್ತ ಸಸ್ಯ ಕ್ಷೇತ್ರದಲ್ಲಿ ವಿತರಣೆಗೆ ಲಭ್ಯವಿರುತ್ತದೆ. ಜೂನ್ ತಿಂಗಳ ಮೊದಲನೇ ವಾರದಿಂದ ಸಸಿಗಳನ್ನು ಪಡೆದುಕೊಳ್ಳಬಹುದಾಗಿದೆ.


ಆಸಕ್ತರು ಜಮೀನಿನ ಪಹಣಿ ಪತ್ರ ಹಾಗೂ ಆಧಾರ್ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಿ ಸಸಿಗಳನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಿದೆ.

ಅರ್ಜಿದಾರರು ಗಿಡ ಪಡೆದುಕೊಳ್ಳುವಾಗ ಸದ್ರಿ ಗಿಡಗಳನ್ನು ನಾಟಿ ಮಾಡುವ ಸ್ಥಳದ ನಿಖರ ಸರ್ವೆ ನಂಬರ್‌ನ್ನು ಕಛೇರಿಗೆ ನೀಡಿ ಸದ್ರಿ ಸ್ಥಳದಲ್ಲಿಯೇ ಕಡ್ಡಾಯವಾಗಿ ನಾಟಿ ಮಾಡತಕ್ಕದ್ದು ಮತ್ತು ಗಿಡಗಳನ್ನು ನಾಟಿ ಮಾಡಿದ ಬಗ್ಗೆ ಇಲಾಖಾಧಿಕಾರಿಯವರು ಜಿಯೋ ಟ್ಯಾಗ್ ಪೋಟೋ ತೆಗೆಯುವಾಗ ಸಹಕರಿಸಬೇಕಾಗಿ ಕೋರಲಾಗಿದೆ ಎಂದು ದರ್ಬೆಯಲ್ಲಿರುವ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯ ಅಧಿಕಾರಿಯವರ ಕಛೇರಿ ಪ್ರಕಟಣೆ ತಿಳಿಸಿದೆ.

69″ ಅಳತೆ ಗಾತ್ರದ ಚೀಲದ ಸಸಿಗಳು ಒಟ್ಟು- 6000. ಸರಕಾರ ನಿಗದಿಪಡಿಸಿರುವ ರಿಯಾಯಿತಿ ದರ ಸಸಿ ಒಂದಕ್ಕೆ ರೂ. 3.00. 812″ ಅಳತೆ ಗಾತ್ರದ ಚೀಲದ ಸಸಿಗಳು ಒಟ್ಟು-14000. ಸರಕಾರ ನಿಗದಿಪಡಿಸಿರುವ ರಿಯಾಯಿತಿ ದರ ಸಸಿ ಒಂದಕ್ಕೆ ರೂ. 6.00. 10*16″ ಅಳತೆ ಗಾತ್ರದ ಚೀಲದ ಸಸಿಗಳು ಒಟ್ಟು- 1000. ಸರಕಾರ ನಿಗದಿಪಡಿಸಿರುವ ರಿಯಾಯಿತಿ ದರ ಸಸಿ ಒಂದಕ್ಕೆ ರೂ. 63.00.

LEAVE A REPLY

Please enter your comment!
Please enter your name here