






ಉಪ್ಪಿನಂಗಡಿ: ಜನಪ್ರಿಯ ವೈದ್ಯ ದಿ. ಮುದ್ರಜೆ ಡಾ. ರಾಮಚಂದ್ರ ಭಟ್ ಅವರ ಧರ್ಮಪತ್ನಿ, ಡಾ.ಎಂ.ಎನ್. ಭಟ್ ಅವರ ತಾಯಿ ಶ್ರೀಮತಿ ಲಲಿತಾ ದೇವಿ (90) ಇಂದು ಬೆಳಗ್ಗೆ ನೆಕ್ಕಿಲಾಡಿಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.


ಮೃತರು ಮೂವರು ಪುತ್ರರು, ಒಬ್ಬ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಿ. ಡಾ.ರಾಮಚಂದ್ರ ಭಟ್ ಅವರು ಉಪ್ಪಿನಂಗಡಿ ಭಾಗದಲ್ಲಿ ಜನಪ್ರಿಯ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಲಲಿತಾ ದೇವಿ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು.













