






ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನ್ನಪ್ರಸಾದ ತಯಾರಿಯ ಕಟ್ಟಿಗೆ ಒಲೆಗೆ ಅಗತ್ಯವಿರುವಂತೆ ಒಂದು ಲೋಡು ಕಟ್ಟಿಗೆಯನ್ನು ಪುಣಚ ಬೈಲುಗುತ್ತು ನಳಿನಾಕ್ಷಿ ಪದ್ಮನಾಭ ರೈ ಮತ್ತು ರಂಜಿತ್ ರೈ ಬೈಲುಗುತ್ತು ಅವರು ಸಮರ್ಪಣೆ ಮಾಡಿದ್ದಾರೆ.


ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಬಾಬುಪ್ರಕಾಶ್ ಶೆಟ್ಟಿ ಸಾರ್ಯಬೀಡು, ಗೋವಿಂದ ನಾಯಕ್, ಸುದರ್ಶನ್, ಪ್ರಜ್ವಲ್ ರೈ, ಉಪವಲಯ ಅರಣ್ಯಾಧಿಕಾರಿ ಉಲ್ಲಾಸ್, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಪದ್ಮನಾಭ, ಗೋಪಾಲ ಪೂಜಾರಿ ಉಪಸ್ಥಿತರಿದ್ದರು.













