







ನೆಲ್ಯಾಡಿ: ಇಲ್ಲಿನ ಸಂತ ಅಲ್ಫೋನ್ಸಾ ಪುಣ್ಯ ಕ್ಷೇತ್ರದಲ್ಲಿ ವಿಶ್ವ ದಾದಿಯರ ದಿನಾಚರಣೆ ಆಚರಿಸಲಾಯಿತು.


ಚರ್ಚ್ನ ಧರ್ಮಗುರು ಫಾ. ಶಾಜಿ ಮ್ಯಾಥ್ಯು ಅವರು ದಾದಿಯರ ನಿಸ್ವಾರ್ಥ ಸೇವೆ, ತ್ಯಾಗ ಮತ್ತು ಮಾನವೀಯ ಕಾಳಜಿಯ ಗುಣಗಾನ ಮಾಡಿ ಸಮಾಜದಲ್ಲಿ ಅವರ ಸೇವೆ ಅತ್ಯಂತ ಮಹತ್ತರವಾದದ್ದು ಎಂದು ಹೇಳಿದರು. ಈ ಸಂದರ್ಭದಲ್ಲಿ ರೆಜಿನ ಕಕ್ಕಾಟ್ಟ್, ಸಂತೋಷ್ ಕಕ್ಕಾಟ್ಟ್, ಶೈನಿ ನಿರಪ್ಪೆಲ್, ಅಲಿನ ಪೆರುಪಳ್ಳಿ, ಡೀನ ಕಾಂಜಿರತ್ತು ಮೂಟ್ಟಿಲ್, ಸ್ಟೆಫಿ ಚೆಪಿತ್ತಾನಮ್, ಅರ್ಚನಾ ಕಚೋಲಮಾಕ್ಕಿಲ್, ಶೆರ್ಲಿ ಎಂಬ್ರಾಂಡಿವಯಲಿಲ್. ಶಿಜಿ ಪಾರಪುರಂ, ಜೋಯಿಸಿ ತೊಂಡಿಯಾತಡಂ, ತ್ರೆಸಿಯಮ್ಮ ಮುನವಳ್ಳಿ, ಚಿಂಜು ಕಡವಿಲ್, ಅನ್ನಮ್ಮ ಚುಂಡಯಿಲ್, ಗ್ರೇಸಿ ಅರಕ್ಕತರ, ಪ್ರಬೀನ ಅಂಬಾಟ್ಟ್ ಅವರನ್ನು ಗೌರವಿಸಲಾಯಿತು. ಲೆಫ್ಟಿನೆಂಟ್ ಜನರಲ್ ಜಿನೋಜ್ ಸನ್ಮಾನ ನೆರವೇರಿಸಿದರು.



ಮಾತೃವೇದಿಕೆ ಅಧ್ಯಕ್ಷೆ ಸುಜಾ ಜೇಮ್ಸ್, ಸಿಸ್ಟರ್ ಲಿಸ್ ಮ್ಯಾಥ್ಯು, ಯುವಜನ ಸಂಘದ ದಿಶಾ, ಜಿತು, ಕ್ರೆಡಿಟ್ ಯೂನಿಯನ್ನ ಶಿಬು, ವಿನ್ಸೆಂಟ್ ಡಿ’ಪೌಲ್, ಸಣ್ಣಿ ಉಪಸ್ಥಿತರಿದ್ದರು. ಬೆರಿಲ್ ಕಾರ್ಯಕ್ರಮ ನಿರೂಪಿಸಿದರು.










