ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ, ಬಲಿಹೊರಟು ಉತ್ಸವ

0

ಆಲಂಕಾರು:ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿದಲ್ಲಿ ಪತ್ತನಾಜೆ ಪ್ರಯುಕ್ತ ಬಲಿವಾಡುಕೂಟ ದೊಡ್ಡ ರಂಗಪೂಜೆ,ಬಲಿಹೊರಟು ಉತ್ಸವ ನಡೆಯಿತು.


ಮೇ.25ರಂದು ಬೆಳಿಗ್ಗೆ ಎಂದಿನಂತೆ ಬೆಳಿಗ್ಗೆ ಶ್ರೀದೇವಿಗೆ ಮತ್ತು ಮಹಾಗಣಪತಿಗೆ ನಿತ್ಯಪೂಜೆ, ಭದ್ರಕಾಳಿ ಗುಡಿಯಲ್ಲಿ ಪೂಜೆ,ಬಲಿವಾಡು ಕೂಟ, ಶ್ರೀ ದೇವಿಗೆ ನವಕ ಕಲಾಶಾಭಿಷೇಕ ಚಾಮುಂಡಿ, ಮಾಡತ್ತಾರು ಬೆಟ್ಟದಲ್ಲಿ ಅರಸು ಉಳ್ಳಾಯ, ಧೂಮವತಿ, ಬಂಟ, ರಕ್ತೇಶ್ವರೀ, ಕೊಡಮಣಿತ್ತಾಯ,ಮಹಿಷಾಂತ್ತಾಯ,ಕ್ಷೇತ್ರದ ಗುಳಿಗ ದೈವಗಳಿಗೆ ತಂಬಿಲ‌ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.ಸಂಜೆ ಶ್ರೀ ದೇವಿಗೆ ಗರ್ಭಗುಡಿಯಿಂದ ಧ್ವಜಸ್ತಂಭದ ವರೆಗೆ 108 ಅಗೇಲು ಹಾಕಿ ದೊಡ್ಡ ರಂಗಪೂಜೆ ಮತ್ತು ಮಹಾಗಣಪತಿ ರಂಗಪೂಜೆ ನಡೆದು ಶ್ರೀ ದೇವಿಯ ಬಲಿಹೊರಟು ಉತ್ಸವ, ಪುಷ್ಪಾರಥೋತ್ಸವ‌ ನಡೆದು,
ನಮಸ್ಕಾರ ಮಂಟಪದಲ್ಲಿ ಶ್ರೀ ದೇವಿಗೆ ಉಯ್ಯಾಲೆಯಲ್ಲಿ ವಸಂತಪೂಜೆ ನಡೆದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಕುಡುಪು ವೇದಮೂರ್ತಿ ಬ್ರಹ್ಮಶ್ರೀ ನರಸಿಂಹ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಡುಪು ಶ್ರೀ ಪದ್ಮರಾಜ್ ತಂತ್ರಿಗಳು ಪೂಜಾ ವಿಧಿವಿಧಾನ ನೇರವೆರಿಸಿದರು. ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.


ಆಗಮಿಸಿದ ಭಕ್ತಾಧಿಗಳು
ರಂಗಪೂಜೆ ಹಾಗು ಇನ್ನೀತರ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವಿಕರಿಸಿ, ಅನ್ನಸಂತರ್ಪಣೆ ಪಾಲ್ಗೊಂಡರು. ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ, ಪವಿತ್ರಪಾಣಿ ಹರೀಶ ಆಚಾರ್ಯ ನಗ್ರಿಗುತ್ತು, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಹರಿಪ್ರಸಾದ್ ಉಪಾಧ್ಯಾಯ, ರಾಧಾಕೃಷ್ಣ ರೈ ಪರಾರಿಗುತ್ತು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ವಿಠಲ ರೈ ಪೆರಾಬೆ ಪಟ್ಟೆ,ಮೋಹನ ಎಸ್ ಶರವೂರು, ಪುಷ್ಪಲತಾ ಹಳೆನೇರೆಂಕಿ, ರೋಹಿಣಿ. ಬಿ.ಯನ್ ನಾಡ್ತಿಲ,ಗೌರವ ಸದಸ್ಯರಾದ ದಾಮೋದರ ಗೌಡ ಶರವೂರು, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ,ಅಭಿವೃದ್ಧಿ ಸಮಿತಿಯ ಸಹಕಾರ್ಯದರ್ಶಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರದಾನ ಕಾರ್ಯದರ್ಶಿ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಸೇರಿದಂತೆ ವಿವಿಧ ಸಮಿತಿಯ ಅದ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉರಪೂರ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here