ಕಡಬ ಜ್ಞಾನಸುಧಾ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಸತತ ನಾಲ್ಕನೇ ಬಾರಿ ಶೇ.100 ಫಲಿತಾಂಶ

0

ಕಡಬ: ವರ್ಲ್ಡ್ ಸ್ಕಿಲ್ ಕೌನ್ಸಿಲ್‌ನಿಂದ ಮಾನ್ಯತೆ ಪಡೆದಿದ್ದು, ಭಾರತ ಸರ್ಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆಯಾಗಿರುವ ಕಡಬದ “ಜ್ಞಾನಸುಧಾ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ”ಯ ಡಿ.ಎಂ.ಇ.ಡಿ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.


ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಪರೀಕ್ಷೆಗೆ ಹಾಜರಾದ ಎಲ್ಲಾ 25 ವಿದ್ಯಾರ್ಥಿ ಶಿಕ್ಷಕಿಯರೂ ಉತ್ತೀರ್ಣರಾಗುವ ಮೂಲಕ ಸಂಸ್ಥೆ ಸತತ ನಾಲ್ಕನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದೆ. ಇದರಲ್ಲಿ 22 ಮಂದಿ ವಿದ್ಯಾರ್ಥಿ ಶಿಕ್ಷಕಿಯರು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಮೂವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಶಿಕ್ಷಕಿಯರು ಹಾಗೂ ಅಂಕಗಳು ಹೀಗಿವೆ: ನಳಿನಾಕ್ಷಿ ಕೆ.ಎಂ. (1,143), ವಂದನಾ ಕೆ (1,133), ಗಾಯತ್ರಿ ಬಿ (1,128), ವಿದ್ಯಾ ಬಿ (1,117), ರಕ್ಷಿತಾ ಎಸ್.ಆರ್. (1,114), ಶಶಿಕಲಾ ಕೆ.ಎಸ್. (1,082), ದಿವ್ಯಶ್ರೀ ಕೆ (1,081), ರಮ್ಯಾ ಕೆ (1,064), ಕಾವ್ಯಶ್ರೀ (1,062), ಅಭಿದಾ ಬಾನು (1,050), ಚೈತನ್ಯ ವಿ (1,042), ಕವಿತಾ ಎನ್ (1,038), ಪ್ರಭಾವತಿ ಎ.ಜಿ. (1,036), ಶಾನಿಯಾ (1,033), ತೌಸೀನಾ ಎಂ (1,033), ವಿಂದ್ಯಾಪಿ ಎಸ್ (1,031), ಲಾವಣ್ಯ ಪಿ (1,027), ನವ್ಯಶ್ರೀ ಎಂ.ಎಸ್. (1,027), ಮೋಹಿನಿ ಡಿ (1,024), ಸಮೀರಾ ಬಾನು (1,021), ಲತಾಕ್ಷಿ (987) ಹಾಗೂ ದೀಪಾ ಎನ್ (973) ಹಾಗೂ ಶ್ರುತಿ ಬಿ, ಜೆನಿಫರ್ ತೋಮಸ್ ಹಾಗೂ ಸವಿತಾ ಜೆ.ಕೆ. ಅವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

LEAVE A REPLY

Please enter your comment!
Please enter your name here