ತಾ|ಬಂಟರ ಸಂಘ, ಮಾತೃ ಸಂಘ, ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ವತಿಯಿಂದ ಸವಣೂರು ಸೀತಾರಾಮ ರೈ ದಂಪತಿಗೆ ಸನ್ಮಾನ

0

ಪುತ್ತೂರು: ತಾಲೂಕು ಬಂಟರ ಸಂಘ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಮಿತಿ ಹಾಗೂ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ವತಿಯಿಂದ ಮೇ 23 ರಂದು ದಾಂಪತ್ಯ ಜೀವನದ 50ರ ಸಂಭ್ರಮಾಚರಿಸಿಕೊಂಡ ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್ ರೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿರುವ ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಹಾಗೂ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅವರ ನೇತೃತ್ರದಲ್ಲಿ ಸನ್ಮಾನ ನಡೆಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಧಾನ ಕಾರ‍್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಽಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ, ಹಿರಿಯರಾದ ಕೆ.ಎಚ್.ದಾಸಪ್ಪ ರೈ ಬಪ್ಪಳಿಗೆ, ವಸಂತ ಕುಮಾರ್ ರೈ ದುಗ್ಗಳ, ನಾರಾಯಣ ರೈ ಪರ್ಪುಂಜಬಾರಿಕೆ, ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಅನಿತಾ ಹೇಮನಾಥ ಶೆಟ್ಟಿ, ಪ್ರಭಾ ಎಸ್ ರೈ ನೂಜಿತರವಾಡುಮನೆ, ಯಮುನಾ ಎಸ್ ರೈಗುತ್ತುಪಾಲು, ಶೇಷಪತಿ ರೈಗುತ್ತುಪಾಲು, ಜಗನ್ನಾಥ ರೈ, ದೇವಕಿ ಎನ್ ರೈ ಪರ್ಪುಂಜಬಾರಿಕೆ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here