ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ರವರಿಂದ ಸೀತಾರಾಮ ರೈ ದಂಪತಿಗೆ ಶುಭ ಹಾರೈಕೆ-ಸನ್ಮಾನ

0

ಪುತ್ತೂರು: ದಾಂಪತ್ಯ ಜೀವನದ 50 ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿರುವ ಸಹಕಾರರತ್ನ ಸವಣೂರು ಸೀತಾರಾಮ ರೈ- ಕಸ್ತೂರಿಕಲಾ ಎಸ್ ರೈ ದಂಪತಿಯನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸನ್ಮಾನಿಸಿ, ಗೌರವಿಸಿದರು.

ಮೇ 25 ರಂದು ಸೀತಾರಾಮ ರೈ ಅವರ ರಶ್ಮಿ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಂಸದ ಕಟೀಲ್ ಅವರು ರೈ ದಂಪತಿ ಅವರಿಗೆ ಸನ್ಮಾನಿಸಿ, ಗೌರವಿಸಿದರು. ಸೀತಾರಾಮ ರೈಯವರ ಮಕ್ಕಳಾದ ರಶ್ಮಿ ಆಶ್ವಿನ್ ಶೆಟ್ಟಿ, ಮಹೇಶ್ ರೈ, ಡಾ.ರಾಜೇಶ್ ರೈ, ಅಳಿಯ ಅಶ್ವಿನ್ ಶೆಟ್ಟಿ, ಸೊಸೆಯಂದಿರಾದ ಪಲ್ಲವಿ ರೈ, ಅಶ್ವಿತಾ ರೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಭರತ್ ರೈ ಪಾಲ್ತಾಡು, ಸುಪ್ರೀತ್ ರೈ ಖಂಡಿಗ, ಸುರೇಶ್ ರೈ ಸೂಡಿಮುಳ್ಳು, ಜಗನ್ನಾಥ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here