ದರ್ಬೆ ಮನೆಯ ಆವರಣಗೋಡೆಗೆ ಡಿಕ್ಕಿಯಾದ ಬಸ್

0

ಪುತ್ತೂರು: ಪುತ್ತೂರಿನಿಂದ ಹೊರಟ ಕೆಎಸ್‌ಆರ್‌ಟಿ ಬಸ್ಸೊಂದು ದರ್ಬೆ ಸಮೀಪ ರಸ್ತೆ ಬದಿಯ ಮನೆಯೊಂದರ ಆವರಣಗೋಡೆಗೆ ಡಿಕ್ಕಿಯಾದ ಘಟನೆ ಆ.26ರಂದು ಬೆಳಗ್ಗೆ ನಡೆದಿದೆ.

ಪುತ್ತೂರಿನಿಂದ ಕುಂಬ್ರದತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ದರ್ಬೆ ವೃತ್ತವನ್ನು ದಾಟಿ ಫಿಲೋಮಿನಾ ಕಾಲೇಜು ಸಮೀಪ ತಲುಪುತ್ತಿದ್ದಂತೆ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿ ಮನೆಯ ಆವರಣಗೋಡೆಗೆ ಡಿಕ್ಕಿಯಾಗಿದೆ. ಘಟನೆಯಿಂದ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here