







ಕೌಶಲ್ಯಕ್ಕೆ ಪೊಲೀಸ್ ಶ್ವಾನದ ಸಾಮರ್ಥ್ಯವೊಂದು ಅತ್ಯುತ್ತಮ ಉದಾಹರಣೆ -ರಫೀಕ್ ಮಾಸ್ಟರ್


ಪುತ್ತೂರು: ಪುತ್ತೂರಿಗೊಂದು ಮುತ್ತು ಅನ್ನೋ ರೀತಿಯಲ್ಲಿ ಡಿಗ್ನಿಟಿ ಐಟಿ ಸಂಸ್ಥೆ ಲೋಕಾರ್ಪಣೆಯೊಂದು ದೊಡ್ಡ ಹೆಜ್ಜೆಯಾಗಿದ್ದು , ಒಳ್ಳೇಯ ರೀತಿಯ ವ್ಯವಸ್ಥೆ, ಒಳ್ಳೇಯ ಟ್ರೈನರ್ಸ್ ಹೊಂದಿರುವ ತಂಡ. ಅದಕ್ಕಾಗಿ ಮ್ಯಾನೇಜಿಂಗ್ ಡೈರೆಕ್ಟರ್ ಬಾತಿಷ್ ಕನಕಮಜಲು ಇವರನ್ನು ಅಭಿನಂದಿಸುವೆಯೆಂದು ಶೈಕ್ಷಣಿಕ ತರಬೇತುದಾರ ರಫೀಕ್ ಮಾಸ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.




ಮೇ.25ರಂದು ಬೊಳುವಾರು ಇನ್ಲ್ಯಾಂಡ್ ಮಯೂರ ಇದರ ಮಹಡಿಯಲ್ಲಿ ಶುಭಾರಂಭಗೊಂಡ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕೌಶಲ ತರಬೇತಿ ಸಂಸ್ಥೆ ಡಿಗ್ನಿಟಿ ಐಟಿ ಇನ್ಸ್ಟಿಟ್ಯೂಟ್ ಇದರ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು , ಬಹಳಷ್ಟು ವಿದ್ಯಾರ್ಥಿಗಳು ಪದವಿ ಪಡೆದುಕೊಂಡರೂ , ಸಂವಹನ ಕೌಶಲ್ಯವಾಗಲಿ , ಸಂದರ್ಶನ ಎದುರಿಸೋ ಸಾಮರ್ಥ್ಯ ಇಲ್ಲವೇ ಸೆಲ್ಫ್ ಇಂಟ್ರುಡ್ಯೂಸ್ ಸ್ಕಿಲ್ ಅವರಲ್ಲಿ ಇರುವಂಥದ್ದು ಬಹಳ ಅಪರೂಪವಾಗಿದೆ.

ಬಹಳ ಮುಖ್ಯವಾಗಿ ಟೆಕ್ನಿಕಲ್ ಸ್ಕಿಲ್ ,ಇನ್ನೊಂದು ಅಕೌಂಟಿಂಗ್ ಸ್ಕಿಲ್ ಮತ್ತೊಂದು ಕಮ್ಯೂನಿಕೇಶನ್ ಸ್ಕಿಲ್. ಈ ಮೂರರ ಮೇಲೆ ಫೋಕಸ್ ಮಾಡಿಕೊಂಡು ಇಂತಹ ಐಟಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿರುವ ತಂಡದ ಕಾರ್ಯ ಶ್ಲಾಘನೀಯವೆಂದ ಅವರು , ಶಿಕ್ಷಣವೆನ್ನುವುದು ಹುಲಿಯ ಹಾಲಂತೆ , ಅದನ್ನು ಕುಡಿದವರು ಘರ್ಜಿಸಲೇ ಬೇಕೆಂದು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ ಮಾತನ್ನು ಉಲ್ಲೇಖಿಸಿ ,ಕೌಶಲ್ಯಕ್ಕೆ ಪೊಲೀಸ್ ಶ್ವಾನವೊಂದರ ಸಾಮರ್ಥ್ಯ ವನ್ನು ಉದಾಹರಣೆಯಾಗಿ ನೀಡಿ , ಯುವ ಜನತೆಗೆ ಕೌಶಲ್ಯ ದ ಮಹತ್ವ ,ತಾಕತ್ತು ವಿವರಿಸಿ , ಅದರ ವ್ಯಾಪ್ತಿ ಎಲ್ಲೆಡೆಯೂ ಹಬ್ಬಿ ,ಹಂಚಿ ,ಅವರಿಸಲಿಯೆಂದು ಹಾರೈಸಿದರು.

ಯುವ ಜನತೆ ಮನಸ್ಸು ಮಾಡಿದರೇ ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಬಹುದು – ಮುಸ್ತಾಫ ಸುಳ್ಯ
ಸುಳ್ಯ ನಗರ ಯೋಜನಾ ಪ್ರಾಧಿಕಾರ ಇದರ ಅಧ್ಯಕ್ಷ ಮುಸ್ತಾಫ ಸುಳ್ಯ ಮಾತನಾಡಿ , “ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನದೇಯಾದ ಇಷ್ಟಗಳು ಮತ್ತು ಆಯ್ಕೆಗಳಿರುತ್ತವೆ. ಕೆಲವರು ತಮ್ಮ ಆಯ್ಕೆಯ ಪ್ರಕಾರ ಉದ್ಯೋಗಗಳನ್ನು ಕಂಡುಕೊಂಡರೇ , ಇನ್ನು ಕೆಲವರಿಗೆ ಅದು ಅಸಾಧ್ಯ.ಆದರೆ, ಇಂದಿನ ಯುವ ಪೀಳಿಗೆ ಕೇವಲ ಯಾವುದೇ ಒಂದು ಸಾಮಾನ್ಯ ಕೆಲಸಕ್ಕಾಗಿ ಕಾಯುತ್ತಾ ಕೂರಬೇಕಾಗಿಲ್ಲ. ಕಾರಣ ತಂತ್ರಜ್ಞಾನದ ಯುಗದಲ್ಲಿ ನಮಗೆ ಅಸಂಖ್ಯಾತ ಅವಕಾಶಗಳಿವೆ. ಮುಖ್ಯವಾಗಿ, ಐಟಿ (IT) ಕ್ಷೇತ್ರ, ಡಿಜಿಟಲ್ ಮಾರ್ಕೆಟಿಂಗ್, ಗ್ರಾಫಿಕ್ ಡಿಸೈನಿಂಗ್ ಮತ್ತು ಅಕೌಂಟಿಂಗ್ನಂತಹ ಕ್ಷೇತ್ರಗಳಲ್ಲಿ ಸಾಕಷ್ಟು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಈ ಆಧುನಿಕ ಕೋರ್ಸ್ಗಳನ್ನು ಕಲಿಯುವ ಮೂಲಕ ನಮ್ಮ ಯುವಕರು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಉದ್ಯೋಗಗಳನ್ನು ಪಡೆದುಕೊಳ್ಳಬಹುದು. ನಮ್ಮ ಜಿಲ್ಲೆಯ ಯುವಜನತೆ ಈ ಎಲ್ಲ ಹೊಸ ತಂತ್ರಜ್ಞಾನಗಳನ್ನು ಕಲಿತು, ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ನಾನು ಹಾರೈಸುವೆಯೆಂದು ಯುವ ಪೀಳಿಗೆಗೆ ಕಿವಿಮಾತು ಹೇಳಿದರು.

ಯುವ ಜನತೆ ತಮ್ಮ ಕೌಶಲ್ಯವನ್ನು ತಂತ್ರಜ್ಞಾನ ದಲ್ಲಿ ಹೂಡಿ – ರಾಮ್ ಭಟ್
ಉದ್ಯಮಿ ರಾಮ್ ಭಟ್ ಮಾತನಾಡಿ ,ಇಂದು ಎಲ್ಲಾ ಮಾಧ್ಯಮಗಳಲ್ಲೂ ನಾವು ಮುಂದುವರಿಯುತ್ತಿದ್ದೇವೆ , ಹಾಗಿದ್ದೇವೆ , ಹೀಗಿದ್ದೇವೆ ಅಂತ ಬರುತ್ತದೆ. ಆದರೇ ಹೊರಕ್ಕೆ ಹೋದಾಗ ನಾವುಗಳು ತುಂಬಾ ಹಿಂದೆ ಇದ್ದೇವೆ. ನಾವು ಇನ್ನೂ ತುಂಬಾ ಮುಂದೆ ಸಾಗಬೇಕಾಗಿದೆ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಕೃಷಿ ಕ್ರಾಂತಿಯಿಂದ ಧಾನ್ಯಗಳನ್ನು ರಫ್ತು , ಬಳಿಕ ಕೈಗಾರಿಕಾ ಕ್ರಾಂತಿಯು ನಡೆಯಿತು. ಆದರೇ , ಟೆಕ್ನಾಲಜಿ ಕ್ರಾಂತಿ ಇಡೀ ಜಗತ್ತಲ್ಲೇ ಆಗುತ್ತಿದ್ದು , ನಾವು ಇಲ್ಲಿ ಕೂತು ಅದನ್ನು ಗ್ರಹಿಸಲು ಆಸಾಧ್ಯವೆಂದ ಅವರು ಇತ್ತೀಚಿನ ನಮ್ಮ ಯುವಕರು ಹೂಡಿಕೆ ಮಾಡಲು ರಿಯಲ್ ಎಸ್ಟೇಟ್ ಒಳ್ಳೆಯದಾ ಇಲ್ಲ ವ್ಯವಹಾರದಲ್ಲ ಅಥವಾ ಚಿನ್ನದ ವ್ಯಾಪಾರವ ಅಂತ ಯೋಚಿಸುತ್ತಾರೆ. ಆದರೇ , ನಿಜವಾಗಿ ನಿಮ್ಮ ಹೂಡಿಕೆಯು ಟೆಕ್ನಾಲಜಿಯಲ್ಲಿರಲೆಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಬಾತಿಷರವರಿಂದ ಎಐ ಕಂಪೆನಿಯೊಂದು ಆರಂಭಗೊಳ್ಳಲಿ ಜೊತೆಗೆ
ಒಂದು ಸ್ಟಾರ್ಟಪ್ ಸಂಸ್ಥೆಯಾಗಿ ಹೊರಹೊಮ್ಮಲಿಯೆಂದು ಹಾರೈಸಿದರು.

ಸಕಲೇಶಪುರ ಜುಮ್ಮಾ ಮಸೀದಿಯ ಧರ್ಮಗುರು ಹನೀಫಿ ,ಬಾತಿಷ್ ಅಳಕೆಮಜಲು , ಇಕ್ಬಾಲ್ ಕನಕಮಜಲು ,ರಿಯಾಝ್ ಮಂಗಳೂರು ,ಇಬ್ರಾಹಿಂ ಕನಕಮಜಲು ,ಕಮಲ್ ಸುಳ್ಯ , ಸ್ವರ್ಣೋದ್ಯಮಿ ಶಿವಾಜಿ ಮಾರುತಿ ಸುರ್ವೆ , ಶರೀಫ್ ಸುಳ್ಯ ,ಆಶಿಕ್ ಶುಭನುಡಿಗಳನ್ನಾಡಿ ,ಹರಸಿದರು. ಕುಂಬ್ರ ಮರ್ಕಝಲ್ ಹುದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ರಹಿಮಾನ್ ಇವರು ಸಂಸ್ಥೆ ಉದ್ಘಾಟನೆ ನೆರವೇರಿಸಿದರು. ಹಲವರು ಅತಿಥಿ ಗಣ್ಯರು ಹಾಜರಿದ್ದರು.

ಆ ಬಳಿಕ ಪಿಯುಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಫಾತಿಮತ್ ಸಹನಾ , ಏಳನೆಯ ಸ್ಥಾನ ಪಡೆದ ಅಬೀಬಾ ಹಾಗೂ ಹತ್ತನೆಯ ಸ್ಥಾನ ಪಡೆದ ಫಾತಿಮತ್ ತೊಯಿಬಾ ಈ ಮೂವರು ವಿದ್ಯಾರ್ಥಿನಿಯರ ಸಹಿತ ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವ ಇಕ್ಬಾಲ್ ಕನಕಮಜಲು ಇವರನ್ನು ಕೂಡ ಅತಿಥಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಶಿಕ್ಷಣ ಪ್ರೇಮಿಗಳು , ಹಿತೈಷಿಗಳು , ವಿದ್ಯಾರ್ಥಿಗಳು ಮತ್ತು ಹೆತ್ತವರು ಮತ್ತು ಸಂಸ್ಥೆಯ ಎಲ್ಲಾ ಸ್ಥರದ ಸಿಬಂದಿಗಳು ಉಪಸ್ಥಿತರಿದ್ದರು. ಮಜಿದಾ ಸ್ವಾಗತಿಸಿ ,ಶಬನಾ ನಿರೂಪಿಸಿದರು.
ಕೌಶಲ್ಯತೆವಿಲ್ಲವೆಂದರೇ ಏನೇನೂ ಇಲ್ಲ…
ಗ್ರಾಮೀಣ ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣದ ಜೊತೆಗೆ ಕೌಶಲ ಆಧಾರಿತ ಶಿಕ್ಷಣ ಒದಗಿಸುವುದು ನಮ್ಮ ಮೂಲ ಉದ್ದೇಶ. ಪರಿಣತಿ ಪಡೆದ ತಂಡ ಮೂಲಕ ವಿದ್ಯಾರ್ಥಿಗಳಿಗೆ ಜ್ಣಾನ ತುಂಬಲು ಅಸಾಧಾರಣ ತಂಡ ಸಿದ್ಧಗೊಂಡಿದೆ. ಇನ್ನು ಭಾಷೆ ಹಾಗೂ ಉದ್ಯೋಗ ಕೌಶಲ್ಯತೆ ಕೂಡ ಜೀವನದ ನಿರ್ಣಾಯಕ ಭಾಗವಾಗಿದ್ದು ಸಂವಹನ ನಡೆಸಲು ಸಾಧ್ಯವಾದರೆ ಯಶಸ್ಸು ಖಂಡಿತ. ಇದರಿಂದ ಆತ್ಮವಿಶ್ವಾಸ , ಸ್ವಾಭಿಮಾನ , ದೈರ್ಯವೆಲ್ಲಾ ತುಂಬಿಕೊಳ್ಳುತ್ತದೆ.
ಬಾತಿಫ್, ಮ್ಯಾನೇಜಿಂಗ್ ಡೈರೆಕ್ಟರ್. ಡಿಗ್ನಿಟಿ ಗ್ರೂಪ್
25% +10% ಸ್ಪೆಶಲ್ ಆಫರ್…!
ಅರ್ಲಿ ಬರ್ಡ್ ಆಫರ್ ಸ್ಕಾಲರ್ ಶಿಪ್ ಮೂಲಕ ಮೊದಲು ಪ್ರವೇಶ ಪಡೆಯೋ ಅಥವಾ ನೋಂದಣಿ ಮಾಡಿಕೊಳ್ಳೋ ವಿದ್ಯಾರ್ಥಿಗಳಿಗೆ ಶೇಕಡಾ 25 ರಿಯಾಯಿತಿ ಜೊತೆಗೆ ಶೇಕಡಾ10 ಶುಭಾರಂಭ ಕೊಡುಗೆಯಿದ್ದು , 6363128487 ಸಂಖ್ಯೆ ಸಂಪರ್ಕಿಸಬಹುದು.
ಈ ಕೆಳಗಿನ ಕೋರ್ಸುಗಳು ಲಭ್ಯವಿವೆ.
- ಡಿಪ್ಲೋಮಾ ಇನ್ ಗ್ರಾಫಿಕ್ ಡಿಸೈನ್ (ಎಐ ಸಂಯೋಜಿತ)
- ಡಿಪ್ಲೋಮಾ ಇನ್ ವಿಡಿಯೋ ಎಡಿಟಿಂಗ್ (ಎಐ ಸಂಯೋಜಿತ)
- ಡಿಪ್ಲೋಮಾ ಇನ್ ಡಿಜಿಟಲ್ ಮಾರ್ಕೆಟಿಂಗ್ (ಎಐ ಸಂಯೋಜಿತ)
- ಪಿಜಿ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್.
- ಡಿಪ್ಲೋಮಾ ಇನ್ ಗಲ್ಫ್ ಅಕೌಂಟಿಂಗ್.
- ಸರ್ಟಿಫಿಕೇಶನ್ ಇನ್ ಸ್ಯಾಪ್ ಫಿಕೊ.
- ಡಿಪ್ಲೋಮಾ ಇನ್ ಫ್ಯಾಶನ್ ಡಿಸೈನ್.
- ಸರ್ಟಿಫಿಕೇಶನ್ ಇನ್ ಮೆಹಂದಿ. ಈ ಮೊದಲಾದ ಕೋರ್ಸ್ ಗಳೆಲ್ಲಾ ಲಭ್ಯವಿದ್ದು ಆಸಕ್ತರು ಕೂಡಲೇ ಸಂಸ್ಥೆ ಕಛೇರಿ ಅಥವಾ ದೂರವಾಣಿ ಸಂಪರ್ಕಿಸುವಂತೆ ಕೋರಲಾಗಿದೆ.
ಯಾರಿಗೆಲ್ಲಾ ಅವಕಾಶವಿದೆ…?
- ಎಸ್ ಎಸ್ ಎಲ್ ಸಿ ,ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ.
- ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಉದ್ಯೋಗಸ್ಥರಿಗೆ.
- ಐಟಿ ಸ್ಕಿಲ್ ನಲ್ಲಿ ಆಸಕ್ತಿ ಇರುವಂತ ಯಾರಾದರೂ ಮತ್ತು ಗೃಹಿಣಿಯರಿಗೆ.










