ವೀರಮಂಗಲದಲ್ಲಿ ಶ್ರೀ ಕೃಷ್ಣ ಪಾರಿಜಾತ ತಾಳಮದ್ದಳೆ

0

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಮತ್ತು ಶ್ರವಣರಂಗ ಪ್ರತಿಷ್ಠಾನ ಸವಣೂರು ಸಹಯೋಗದಲ್ಲಿ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅಧಿಕಮಾಸದ ಪ್ರಯುಕ್ತ ಯಕ್ಷ ಪುರುಷೋತ್ತಮ ಸರಣಿಯ ಮೂರನೇ ಕಾರ್ಯಕ್ರಮವಾಗಿ ಶ್ರೀ ಕೃಷ್ಣ ಪಾರಿಜಾತ ತಾಳಮದ್ದಳೆ ಜರಗಿತು.

ಭಾಗವತರಾಗಿ ಸತೀಶ್ ಇರ್ದೆ, ಆನಂದ ಸವಣೂರು ಭಾಗವಹಿಸಿದರು. ಹಿಮ್ಮೇಳದಲ್ಲಿ ಅಚ್ಯುತ ಪಾಂಗಣ್ಣಾಯ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ದೇವೇಂದ್ರ, ಗುಡ್ಡಪ್ಪ ಬಲ್ಯ ನರಕಾಸುರ, ಈಶ್ವರ ಭಟ್ ಗುಂಡ್ಯಡ್ಕ ಮತ್ತು ಭಾಸ್ಕರ ಬಾರ್ಯ ಶ್ರೀ ಕೃಷ್ಣ, ತಾರಾನಾಥ ಸವಣೂರು ಸತ್ಯಭಾಮೆ ಪಾತ್ರ ನಿರ್ವಹಿಸಿದರು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾವ ಶಿವರಾಮ್ ಭಟ್, ಮುಖ್ಯ ಅರ್ಚಕ ಪಿ ರಾಧಾಕೃಷ್ಣ ಶಗ್ರಿತ್ತಾಯ, ವಿಶ್ವಸ್ಥ ಸಮಿತಿಯ ಉಮೇಶ ಕೋಡಿಬೈಲು, ವಿದ್ವಾನ್ ಗೋಪಾಲಕೃಷ್ಣ ಗೌಡ ವೀರಮಂಗಲ, ಹರ್ಷ ಗುತ್ತು ಮೊದಲಾದವರು ಉಪಸ್ಥಿತರಿದ್ದು ಕಲಾವಿದರನ್ನು ಗೌರವಿಸಿದರು. ಶ್ರವಣ ರಂಗ ಪ್ರತಿಷ್ಠಾನದ ಸಂಚಾಲಕ ತಾರಾನಾಥ ಸವಣೂರು ಸ್ವಾಗತಿಸಿದರೆ, ಶ್ರೀ ಆಂಜನೇಯ ಯಕ್ಷಗಾನ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here