ರಸಗೊಬ್ಬರ ಖರೀದಿ ಮೇಲೆ ರಿಯಾಯಿತಿ- ಕೆದಂಬಾಡಿ ಕೆಯ್ಯೂರು ಪ್ರಾ.ಕೃ.ಪ.ಸ.ಸಂಘದಿಂದ ಘೋಷಣೆ

0

ಪುತ್ತೂರು: ಇನ್ನೇನು ಮಳೆಗಾಲ ಆರಂಭವಾಗಲಿದ್ದು ಕೃಷಿಕರಿಗೆ ರಸಗೊಬ್ಬರ ಖರೀದಿ ಮೇಲೆ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ವಿಶೇಷ ರಿಯಾಯಿತಿ ಘೋಷಿಸಿದೆ. ಸಂಘದ ಸಾಲಗಾರ ಸದಸ್ಯರುಗಳಿಗೆ 1 ತಿಂಗಳ ಮಟ್ಟಿಗೆ ಬಡ್ಡಿ ರಹಿತವಾಗಿ ರಸಗೊಬ್ಬರ ಖರೀದಿ ಮಾಡುವ ಅವಕಾಶ ನೀಡಲಾಗಿದೆ. ಈಗಾಗಲೇ ರಸಗೊಬ್ಬರ ವಿತರಣೆ ನಡೆಯುತ್ತಿದ್ದು ಸಂಘದ ಸಾಲಗಾರ ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಮುಖ್ಯಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here