






ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಸ್ವರ್ಣ ಕವಚ ನಿರ್ಮಾಣಕ್ಕೆ ಪ್ರೇಮಲತಾ ಬಪ್ಪಳಿಗೆ ಮತ್ತು ದೇವಪ್ಪ ಬಪ್ಪಳಿಗೆ ಅವರು ತಲಾ 2 ಗ್ರಾಂ ಸ್ವರ್ಣ ಸಮರ್ಪಣೆ ಮಾಡಿದರು.


ದೇವಳದ ಜೀರ್ಣೋದ್ದಾರಕ್ಕೆ ಸುಜಿತ್ ರೈ ಮೈಸೂರು ಮತ್ತು ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲುಗುತ್ತು ಅವರು ತಲಾ ರೂ. 1 ಲಕ್ಷ ನೀಡಿದ್ದಾರೆ. ದೇಣಿಗೆ ನೀಡಿದ ದಾನಿಗಳನ್ನು ಈ ಸಂದರ್ಭ ದೇವಳದ ವತಿಯಿಂದ ಗೌರವಿಸಲಾಯಿತು.













