






ಪುತ್ತೂರು: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾ.ಪಂ.ಬಿಲ್ಡಿಂಗ್‌ನಲ್ಲಿರುವ ಕಡಬ ತಾಲೂಕಿನ ಐತ್ತೂರು ನಿವಾಸಿ ನಿಝಾಮ್ ಎಂಬವರಿಗೆ ಸೇರಿದ ಅಡಿಕೆ ವ್ಯಾಪಾರ ಅಂಗಡಿಯಿಂದ 1 ಲಕ್ಷ ರೂ.ಕಳ್ಳತನಗೊಂಡಿರುವ ಘಟನೆ ಮೇ 26ರಂದು ಬೆಳಗ್ಗೆ ನಡೆದಿದೆ.


ನಿಝಾಮ್ ಅವರು ಗುತ್ತಿಗಾರಿನಲ್ಲಿ ಗ್ರಾಮ ಪಂಚಾಯತ್ ಬಿಲ್ಡಿಂಗ್‌ನಲ್ಲಿರುವ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ಸದ್ರಿ ಅಂಗಡಿಯಲ್ಲಿ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದರು. ಮೇ 26ರಂದು ಬೆಳಗ್ಗೆ ಎಂದಿನಂತೆ ಅಂಗಡಿಯ ಬಾಗಿಲು ತೆರೆದು ಅಡಿಕೆ ಮಾರಾಟ ಮಾಡಿದ ರೂ.1.48 ಲಕ್ಷ ಹಾಗೂ ತನ್ನಲ್ಲಿದ್ದ ರೂ.2 ಸಾವಿರವನ್ನು ಅಂಗಡಿಯ ಡ್ರಾವರ್‌ನಲ್ಲಿ ಇಟ್ಟಿದ್ದರು. ಸ್ವಲ್ಪ ಸಮಯದ ಬಳಿಕ ಸದ್ರಿ ಹಣದಲ್ಲಿ ರೂ.50 ಸಾವಿರವನ್ನು ತನ್ನ ಅಂಗಡಿಯ ಪಕ್ಕದಲ್ಲಿದ್ದ ಮತ್ತೋರ್ವ ವರ್ತಕನಿಗೆ ನೀಡಲು ತೆರಳಿದ್ದು, ಹಿಂತಿರುಗಿ ಅಂಗಡಿಗೆ ಬಂದು ನೋಡಿದಾಗ ಡ್ರಾವರ್‌ನಲ್ಲಿದ್ದ ಹಣದ ಬ್ಯಾಗ್ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಅಂಗಡಿಯಲ್ಲಿ ಇಲ್ಲದೇ ಇರುವ ಸಮಯ ಯಾರೋ ಬಂದು ಅಂಗಡಿಯ ಡ್ರಾವರ್‌ನಲ್ಲಿಟ್ಟಿದ್ದ ಹಣದ ಬ್ಯಾಗ್‌ನಿಂದ ರೂ. 1 ಲಕ್ಷ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ನಿಝಾಮ್ ಅವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













