ವಿವೇಕಾನಂದ ಕನ್ನಡ ಶಾಲೆಯಲ್ಲಿ ಸ್ಮಾರ್ಟ್ ಬೋರ್ಡ್ ಕಲಿಕಾ ಪ್ರಕ್ರಿಯೆಗೆ ಚಾಲನೆ : ಲಯನ್ಸ್ ಕ್ಲಬ್ ಕೊಡುಗೆ

0

ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿರುವ ಈ ಕಾಲದಲ್ಲಿ ಸ್ಮಾರ್ಟ್ ಬೋರ್ಡ್ ಬಳಸಿ ನಡೆಯುವ ಕಲಿಕಾ ಪ್ರಕ್ರಿಯೆ ಪರಿಣಾಮಕಾರಿ ಮಾಧ್ಯಮವಾಗಿದ್ದು, ಮಕ್ಕಳು ಸ್ಮಾರ್ಟ್ ಆಗಿ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಲಯನ್ಸ್ ಜಿಲಾ ಪಿ.ಆರ್.ಒ ವಿ.ಎನ್. ಸುದರ್ಶನ್ ಪಡಿಯಾರ್ ಹೇಳಿದರು.

ವಿವೇಕಾನಂದ ಕನ್ನಡ ಶಾಲೆಗೆ ಪುತ್ತೂರು ಲಯನ್ಸ್ ಕ್ಲಬ್ ವತಿಯಿಂದ ನೀಡಲಾದ ಸ್ಮಾರ್ಟ್ ಬೋರ್ಡ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಾವು ವಿವೇಕಾನಂದ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಕನ್ನಡ ಶಾಲೆಗೆ ನೀಡಲಾಗುತ್ತಿರುವ ಸಹಕಾರಕ್ಕಾಗಿ ಹೆಮ್ಮೆ ಇದೆ ಎಂದರು.

ಪುತ್ತೂರು ಲಯನ್ಸ್ ಅಧ್ಯಕ್ಷೆ ಪ್ರೇಮಲತಾ ರಾವ್ ಮಾತನಾಡಿ, ತಮ್ಮ ಅವಧಿಯಲ್ಲಿ ಶಾಲೆಗೆ ನೀಡುತ್ತಿರುವ ಈ ಕೊಡುಗೆಯು ಪೂರ್ಣಪ್ರಮಾಣದಲ್ಲಿ ಪ್ರಯೋಜನಕಾರಿಯಾಗಲಿ. ಇನ್ನಷ್ಟು ಇಂತಹ ಕೊಡುಗೆಗಳು ವಿವೇಕಾನಂದ ಕನ್ನಡ ಶಾಲೆಗೆ ದೊರಕಿ ಶಾಲಾ ಪಠ್ಯ-ಪಠ್ಯಪೂರಕ ಚಟುವಟಿಕೆಗಳು ಪ್ರಗತಿ ಹೊಂದಲಿ ಎಂದು ಶುಭ ಹಾರೈಸಿದರು.

ಶಾಲಾ ಅಧ್ಯಕ್ಷ ರಮೇಶ್ಚಂದ್ರ ಅವರು ಲಯನ್ಸ್ ಗವರ್ನರ್, ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು.ದೀಪ ಪ್ರಜ್ವಲನೆ, ಪುಷ್ಪಾರ್ಚನೆ ಹಾಗೂ ವಿದ್ಯಾರ್ಥಿನಿ ಶ್ರೀರಕ್ಷಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲಾ ವೃತಿಕಾ ವಿಜ್ಞಾನ ಸಂಘದ ಸಹಶಿಕ್ಷಕರಾದ ರೇಷ್ಮಾ, ಶುಭಶ್ರೀ, ಶ್ವೇತಾ ಕಾರ್ಯಕ್ರಮ ಸಂಘಟಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ವಸಂತ ಸುವರ್ಣ, ಲಯನ್ಸ್ ಕಾರ್ಯದರ್ಶಿ ಅರವಿಂದ ಭಗವಾನ್ ರೈ, ಒರಿಜಿ ಝೋನ್ ಅಡ್ವೈಸರ್ ಸದಾಶಿವ ನಾಯಕ್, ಜಿಲ್ಲಾ ಚೇರ್ ಪರ್ಸನ್ ವತ್ಸಲಾ ರಾಜ್ಞಿ, ಕೋಶಾಧಿಕಾರಿ ಸುಧಾಕರ್ ಕೆ.ಪಿ, ಸದಸ್ಯರುಗಳಾದ ತ್ರಿವೇಣಿ ಪೆರುವೋಡಿ, ಜಯಶ್ರೀ ಡಿ.ಸಿ, ಆನಂದ ರೈ, ವಿಶ್ವನಾಥ ಗೌಡ, ಅಜಿತ್ ಶೆಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ವಾಗ್ಲೆ, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.ಶಾಲಾ ಪ್ರೌಢ ವಿಭಾಗದ ಮುಖ್ಯಗುರು ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here