







ಪುತ್ತೂರು: ದಾಂಪತ್ಯ ಜೀವನದ 50ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿರುವ ಸಹಕಾರರತ್ನ ಸವಣೂರು ಸೀತಾರಾಮ ರೈ- ಕಸ್ತೂರಿಕಲಾ ಎಸ್ ರೈ ದಂಪತಿಯನ್ನು ಸುಳ್ಯ ಅಕಾಡೆಮಿ ಅಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ಇದರ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಮತ್ತು ಅವರ ಪತ್ನಿ ಜ್ಯೋತಿ ಆರ್ ಪ್ರಸಾದ್ ಅವರು ಸನ್ಮಾನಿಸಿ, ಗೌರವಿಸಿದರು.


ಮೇ.23 ರಂದು ಸವಣೂರು ಸೀತಾರಾಮ ರೈ ಅವರ ರಶ್ಮಿ ನಿವಾಸಕ್ಕೆ ಭೇಟಿ ನೀಡಿದ ಡಾ.ರೇಣುಕಾ ಪ್ರಸಾದ್ ಅವರು ರೈ ದಂಪತಿ ಅವರನ್ನು ಗೌರವಿಸಿದರು.



ಸೀತಾರಾಮ ರೈ ಅವರ ಅಳಿಯ ಅಶ್ವಿನ್ ಎಲ್ ಶೆಟ್ಟಿ , ಮಕ್ಕಳಾದ ಮಹೇಶ್ ರೈ, ಡಾ.ರಾಜೇಶ್ ರೈ, ರಶ್ಮಿ ಅಶ್ವಿನ್ ಶೆಟ್ಟಿ, ಸೊಸೆಯಂದಿರಾದ ಪಲ್ಲವಿ ಮಹೇಶ್ ರೈ ಮತ್ತು ಅಶ್ವಿತಾ ರಾಜೇಶ್ ರೈ ಉಪಸ್ಥಿತರಿದ್ದರು.











