






ಪುತ್ತೂರು: ಕಡಬ ತಾಲೂಕು ಗ್ರೇಡ್-1 ತಹಸಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾಕರ ಖಜೂರೆ ಅವರನ್ನು ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕು ತಹಸಿಲ್ದಾರ್-ಗ್ರೇಡ್ 1 ಸ್ಥಾನಕ್ಕೆ ವರ್ಗಾವಣೆಗೊಳಿಸಲಾಗಿದೆ.


ಕಂದಾಯ ಇಲಾಖೆಯ ತಹಸಿಲ್ದಾರ್ ವೃಂದದ 27 ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಕಂದಾಯ ಇಲಾಖೆ ಅಧಿನ ಕಾರ್ಯದರ್ಶಿ (ಸೇವೆಗಳು-3 ಮತ್ತು ವಿ.ನಿ) ನರಸಿಂಹಮೂರ್ತಿ ಜಿ.ಕೆ.ಅವರು ಮೇ 27ರಂದು ಆದೇಶಿಸಿದ್ದಾರೆ.ಪ್ರಭಾಕರ ಖಜೂರೆ ಅವರನ್ನು ಕಲಬುರಗಿ ಕಮಲಾಪುರದಲ್ಲಿ ಮೊಹ್ಮದ್ ಮೊಹಸೀನ್ ಅವರ ಸ್ಥಳಕ್ಕೆ ನಿಯುಕ್ತಿಗೊಳಿಸಲಾಗಿದೆ.ಸದ್ಯ ಕಡಬ ತಾಲೂಕಿಗೆ ಯಾರನ್ನೂ ನಿಯುಕ್ತಿಗೊಳಿಸಲಾಗಿಲ್ಲ.













