ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಝ್‌ಹಾ (ಬಕ್ರೀದ್) ಆಚರಣೆ

0

‘ಸಮರ್ಪಣಾ ಭಾವದಿಂದ ಮಾನವ ಕ್ರಿಯಾಶೀಲತೆ ಬೆಳೆಸಬೇಕು’: ಖಾಮಿಲ್ ಸಖಾಫಿ

ಪುತ್ತೂರು: ತ್ಯಾಗ, ಬಲಿದಾನಗಳ ಪ್ರತೀಕವಾಗಿ ಪವಿತ್ರ ಹಜ್ ಕರ್ಮದ ಹಿನ್ನೆಲೆಯಲ್ಲಿ ಆಚರಿಸಲ್ಪಡುವ ಮುಸ್ಲಿಮರ ಬಕ್ರೀದ್ ಹಬ್ಬ ಸುಳ್ಯ ತಾಲೂಕಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಧರ್ಮಗುರುಗಳಾದ ಅಶ್ರಫ್ ಖಾಮಿಲ್ ಸಖಾಫಿ ಅವರ ನೇತೃತ್ವದಲ್ಲಿ ಈದ್ ಸಂದೇಶ, ಖುತುಬಾ ಪ್ರವಚನ ಮತ್ತು ವಿಶೇಷ ಪ್ರಾರ್ಥನೆ ನೆರವೇರಿತು.ನಂತರ ಮಾತನಾಡಿದ ಇಮಾಮರು, “ಪ್ರವಾದಿ ಇಬ್ರಾಹಿಂ ಅವರು ದೇವರ ಸತ್ವ ಪರೀಕ್ಷೆಯನ್ನು ತಾಳ್ಮೆ ಮತ್ತು ತ್ಯಾಗದ ಮೂಲಕ ಎದುರಿಸಿ ದೇವರ ಸಂಪ್ರೀತಿಯನ್ನು ಗಳಿಸಿದವರು. ಅವರ ತತ್ವ, ಆದರ್ಶ ಇಂದಿಗೂ ಪ್ರಸ್ತುತ. ಸಮರ್ಪಣಾ ಭಾವದಿಂದ ಮಾನವ ಕ್ರಿಯಾಶೀಲತೆ ಬೆಳೆಸಬೇಕು” ಎಂದರು.

ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆ.ಎಂ.ಎಸ್., ಪದಾಧಿಕಾರಿಗಳಾದ ಹಮೀದ್ ಬೀಜಕೊಚ್ಚಿ, ಎಸ್.ಎಂ. ಹಮೀದ್, ಕೆ.ಎಸ್. ಉಮ್ಮರ್, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಅನ್ಸಾರ್ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ಕಟ್ಟೆಕ್ಕಾರ್ಸ್, ಉಪಾಧ್ಯಕ್ಷ ಕೆ.ಬಿ. ಇಬ್ರಾಹಿಂ, ಗ್ರೀನ್ ವ್ಯೂ ಕನ್ವೀನರ್ ಶಾಫಿ ಕುತ್ತಮೊಟ್ಟೆ, ಅಬ್ದುಲ್ ಮಜೀದ್ ಜನತಾ, ಸಿದ್ದೀಕ್ ಕೊಕ್ಕೊ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here