






*ನಾನು ಮುಳಿಯದ ಫ್ಯಾನ್ ಆಗಿದ್ದೇನೆ- ಚಂದ್ರಹಾಸ ಶೆಟ್ಟಿ
*ಸಮಯದ ನಿರ್ವಹಣೆಗೆ ವಾಚ್ ಅಗತ್ಯ- ಡಾ.ಆಶಾ ಪುತ್ತೂರಾಯ
*ಟಾಟಾ ಕಂಪೆನಿ, ಮುಳಿಯದ ಸಮಾಗಮ- ಕೃಷ್ಣನಾರಾಯಣ ಮುಳಿಯ


ಪುತ್ತೂರು: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರರಾಗಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಇದೀಗ ಟಾಟಾ ಬ್ರ್ಯಾಂಡ್‌ನ ವಿವಿಧ ವಿನ್ಯಾದ ವಾಚ್‌ಗಳ ಮಾರಾಟ ಕ್ಷೇತ್ರದಲ್ಲೂ ಹೆಜ್ಜೆಯಿಟ್ಟಿದ್ದು ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ಮೇ.28ರಂದು ಮುಳಿಯ’ಸ್ ಟೈಮ್ ಝೋನ್ ವಾಚ್ ಕೌಂಟರ್ ಶುಭಾರಂಭಗೊಂಡಿತು.



ನಾನು ಮುಳಿಯದ ಫ್ಯಾನ್ ಆಗಿದ್ದೇನೆ:
ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನೂತನ ವಾಚ್ ಕೌಂಟರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮುಳಿಯ ಅಂದರೆ ಒಂದು ಬ್ರ್ಯಾಂಡ್ ಆಗಿದೆ. ಮುಳಿಯಕ್ಕೆ ಬರುವುದೆಂದರೆ ನಮಗೆ ಸಂತೋಷ. ಪುತ್ತೂರಿನ ಕೋಟಿಚೆನ್ನಯ ಜೋಡುಕರೆ ಕಂಬಳಕ್ಕೆ ಪ್ರಾರಂಭದಿಂದ ಇಲ್ಲಿಯವರೆಗೆ ಒಂದು ಪವನ್ ಚಿನ್ನ ನೀಡುತ್ತಿರುವವರು ಮುಳಿಯ ಸಂಸ್ಥೆಯವರು ಇದು ನಮಗೆ ಹೆಮ್ಮೆ ಎಂದರು. ಧಾರ್ಮಿಕ, ಸಾಮಾಜಿಕ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು ಕೇಶವಪ್ರಸಾದ ಮುಳಿಯ ಹಾಗೂ ಕೃಷ್ಣನಾರಾಯಣ ಮುಳಿಯರವರು ಎಂದ ಅವರು ನಾನು ಮುಳಿಯದ ಫ್ಯಾನ್ ಆಗಿದ್ದೇನೆ. ಇಂದು ಆರಂಭಗೊಂಡ ಟಾಟಾ ವಾಚು ಮಳಿಗೆಗೆ ದೇವರ ಆಶೀರ್ವಾದ ಇರಲಿ. ಮುಳಿಯ ಸಂಸ್ಥೆ ರಾಜ್ಯ ಹೊರರಾಜ್ಯದಲ್ಲಿಯೂ ಬೆಳಗಲಿ ಎಂದು ಹಾರೈಸಿದರು.

ಸಮಯದ ಮೌಲ್ಯ, ನಿರ್ವಹಣೆಗೆ ವಾಚ್ ಅಗತ್ಯ:
ಮುಖ್ಯ ಅತಿಥಿ ಬೊಳುವಾರು ಮೆಡಿಕಲ್ ಸೆಂಟರ್‌ನ ಕಣ್ಣಿನ ತಜ್ಞೆ ಡಾ.ಆಶಾ ಪುತ್ತೂರಾಯ ಮಾತನಾಡಿ ಕಳೆದುಹೋದ ಸಮಯ ಮತ್ತೆ ಮರಳಿ ಬರುವುದಿಲ್ಲ. ಯಾವುದೇ ತಂತ್ರಜ್ಞಾನ ಬದಲಾದರೂ ಸಮಯದ ಮೌಲ್ಯ ಬದಲಾಗುವುದಿಲ್ಲ. ಸಮಯದ ಅರಿವು ಅಗತ್ಯ. ಇದಕ್ಕೆ ನಮಗೆ ಬೇಕಾಗಿರುವುದು ವಾಚ್. ಸಮಯದ ನಿರ್ವಹಣೆಗೆ ವಾಚು ಅಗತ್ಯ ಬೆಕಾಗಿದೆ. ಮಕ್ಕಳಿಂದ ವೃದ್ಧರವರೆಗೆ ವಾಚುಗಳ ಬೇಡಿಕೆ ಇದೆ. ಪುತ್ತೂರಿನ ಜನತೆಗೆ ಬೇಕಾದ ವಾಚುಗಳ ಸಂಗ್ರಹ ಇಲ್ಲಿದೆ ಎಂದರು. ನಾನು ಸಣ್ಣವಳಿರುವಾಗಲೇ ಮುಳಿಯಕ್ಕೆ ಬರುತ್ತಿದ್ದೆ. ಆಗ ಸಣ್ಣ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ಮಳಿಗೆ ಇಂದು ವಿಶಾಲವಾದ ಶೋರೂಮ್ ಹೊಂದಿದೆ. ಅಲ್ಲದೆ ನಗುಮೊಗದ ಸೇವೆ ಕೊಡುವ ಸಿಬಂದಿಯನ್ನೂ ಹೊಂದಿದೆ. ಪುತ್ತೂರಿನ ಜನತೆಯ ಪ್ರೀತಿ ವಿಶ್ವಾಸ, ಗ್ರಾಹಕ ಸ್ನೇಹಿಯಾದ ಕಾರಣ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಿದೆ ಎಂದ ಅವರು ಮುಳಿಯದಿಂದ ಸಮಾಜಕ್ಕೆ ಕೊಡುಗೆಯೂ ಇದೆ. ವಿದೇಶದಲ್ಲಿಯೂ ಮುಳಿಯ ಸಂಸ್ಥೆ ಬೆಳಗಲಿ ಎಂದು ಹಾರೈಸಿದರು.
ಟಾಟಾ ಕಂಪೆನಿ, ಮುಳಿಯದ ಸಮಾಗಮ:
ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 82 ವರ್ಷಗಳಿಂದ ಮುಳಿಯ ಗ್ರಾಹಕರ ವಿಶ್ವಾಸಕ್ಕೆ ಹೆಸರುವಾಸಿಯಾಗಿದೆ. ಕರಾರುವಕ್ಕಾದ ಶುದ್ಧತೆ, ಅತ್ಯುತ್ತಮ ಡಿಸೈನ್, ಗ್ರಾಹಕಸ್ನೇಹಿಯಾದ ಪರಿಸರದೊಂದಿಗೆ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿರುವ ಸಂಸ್ಥೆಯಾಗಿದೆ. ಅದೇ ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಹೆಸರಾಂತ ಸಂಸ್ಥೆ ಟಾಟಾ ಕಂಪೆನಿಯೊಂದಿಗೆ ಇಂದು ಸಮಾಗಮ ನಡೆಯುತ್ತಿದೆ. ಟಾಟಾ ಕಂಪೆನಿಯ ವಿವಿಧ ಬ್ರ್ಯಾಂಡ್‌ನ ವಾಚುಗಳ ಮಾರಾಟ ಕೌಂಟರ್ ಆರಂಭಿಸಿದ್ದು ಇಲ್ಲಿ ಗ್ರಾಹಕರ ಆಯ್ಕೆಗೆ ವಾಚುಗಳು ಲಭ್ಯವಿದೆ. ಅಲ್ಲದೆ ನೆಬುಲ ಗೋಲ್ಡ್ ವಾಚುಗಳೂ ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ಸನ್ಮಾನ:
ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ದ.ಕ.ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ, ಗ್ರಾಮೀಣ ಭಾಗದ ಪಾಣಾಜೆ ವಡ್ಯ ಶಾಲೆಯ ವಿದ್ಯಾರ್ಥಿನಿ ನಿಖಿತಾ ಹಾಗೂ ಕಳೆದ 4 ದಶಕಗಳಿಂದ ಪುತ್ತೂರಿನಲ್ಲಿ ವಾಚ್‌ಗಳ ಮಾರಾಟದಲ್ಲಿ ಅಗ್ರಪಂಕ್ತಿಯಲ್ಲಿರುವ ಸಂಸ್ಥೆ, ಮಾನಸ ಟೈಮ್ ಅಪ್ಟಿಕಲ್ಸ್‌ನ ಮಾಲಕರಾದ ಕೇಶವಮೂರ್ತಿರವರನ್ನು ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣನಾರಾಯಣ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬಂದಿಗಳಾದ ಮಾನಸ ಪ್ರಾರ್ಥಿಸಿ ಹರೀಶ್ ಸ್ವಾಗತಿಸಿದರು. ರಾಜೇಶ್ ವಂದಿಸಿ ಮೃದುಲಾ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.

18 ಕ್ಯಾರೆಟ್‌ನ ಟೈಟಾನ್ ನೆಬುಲಾ ಗೋಲ್ಡ್ ವಾಚ್‌ಗಳ ಬಿಡುಗಡೆಟೈಟಾನ್ ಬ್ರ್ಯಾಂಡ್‌ನ ಅಡಿಯಲ್ಲಿ ಬರುವ 18 ಕ್ಯಾರೆಟ್ ಶುದ್ಧ ಚಿನ್ನದ ಐಷಾರಾಮಿ ವಾಚುಗಳನ್ನು ಬಿಡುಗಡೆಗೊಳಿಸಲಾಯಿತು. ಪ್ರತಿಯೊಂದು ವಾಚ್ 18 ಕ್ಯಾರೆಟ್ ಸಾಲಿಡ್ ಗೋಲ್ಡ್‌ನಿಂದ ವಿನ್ಯಾಸಗೊಳಿಸಲಾಗಿದ್ದು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ, ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಆಕರ್ಷಕ ಕಲೆಕ್ಷನ್‌ಗಳು ಲಭ್ಯವಿದೆ.










