ಕಣ್ಣಳತೆಯಲ್ಲಿ ಬಹುಮಾನ ಗೆಲ್ಲುವ ಅದ್ಭುತ ಅವಕಾಶ – ಮಂಗಳೂರು ಜ್ಯುವೆಲ್ಸ್ ಪ್ರಸ್ತುತಪಡಿಸುತ್ತಿದೆ ‘ಗೆಸ್ ಮಾಡಿ-ಪ್ರೈಸ್ ಗೆಲ್ಲಿ’

1

ಪುತ್ತೂರು: ಕಳೆದ 30 ವರ್ಷಗಳಿಂದ ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣಗಳ ಮಾರಾಟ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ, ಪ್ರೀತಿಗೆ ಪಾತ್ರವಾಗಿರುವ ಮಂಗಳೂರು ಜ್ಯುವೆಲ್ಸ್ ಇದೀಗ ಮುತ್ತಿನ ನಗರಿ ಪುತ್ತೂರಿಗೆ ಪಾದಾರ್ಪಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅತ್ಯದ್ಭುತ ಕೊಡುಗೆಗಳನ್ನು ಸಂಸ್ಥೆಯು ನೀಡುತ್ತಿದ್ದು, ಆಭರಣದ ಬೆಲೆಯನ್ನು ಊಹಿಸಿ, ಅದೃಷ್ಟಶಾಲಿಗಳಾಗಿ ಬಹುಮಾನ ಗೆಲ್ಲುವಂತಹ ಅಪೂರ್ವ ಅವಕಾಶವನ್ನು ಜನತೆಗೆ ನೀಡುತ್ತಿದೆ. ಈ ನಿಟ್ಟಿನಲ್ಲಿ ‘ಗೆಸ್ ಮಾಡಿ-ಪ್ರೈಸ್ ಗೆಲ್ಲಿ’ ಎನ್ನುವ ವಿನೂತನ ಕಾರ್ಯಕ್ರಮ ಮೇ 29ರಿಂದ `ಸುದ್ದಿ’ ಚಾನೆಲ್ ಮೂಲಕ ಮೂಡಿಬರಲಿದೆ.

‘ಗೆಸ್ ಮಾಡಿ-ಪ್ರೈಸ್ ಗೆಲ್ಲಿ’ ಎನ್ನುವುದು ಒಂದು ಟಿ.ವಿ. ಕಾರ್ಯಕ್ರಮವಾಗಿದ್ದು, ಮೇ 29ರಿಂದ ಪ್ರತೀ ಶುಕ್ರವಾರ ಸಂಜೆ 6 ಗಂಟೆಯಿಂದಸುದ್ದಿ’ ಕೇಬಲ್ ಚಾನೆಲ್, ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ಮತ್ತು `ಸುದ್ದಿ ಬಿಡುಗಡೆ’ ಫೇಸ್‍ಬುಕ್ ಪೇಜ್‍ನಲ್ಲಿ ಪ್ರಸಾರಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಚಿನ್ನ/ ಬೆಳ್ಳಿ/ ವಜ್ರದ ಆಭರಣವೊಂದನ್ನು ತೋರಿಸಲಾಗುತ್ತದೆ. ವೀಕ್ಷಕರು ನೇರಪ್ರಸಾರದಲ್ಲಿ ಅದನ್ನು ನೋಡಿ, ಆ ಆಭರಣದ ಅಂದಾಜು ತೂಕ ಮತ್ತು ಮೌಲ್ಯ ಎಷ್ಟಾಗಬಹುದು ಎನ್ನುವುದನ್ನು ಕರೆಯ ಮೂಲಕ ಕಾರ್ಯಕ್ರಮದ ನಿರೂಪಕರಿಗೆ ತಿಳಿಸಬೇಕು. ಕಾರ್ಯಕ್ರಮದ ಕೊನೆಯಲ್ಲಿ ಆಭರಣದ ನಿಖರ ಬೆಲೆಯನ್ನು ತಿಳಿಸಲಾಗುತ್ತದೆ. ನೇರಪ್ರಸಾರದಲ್ಲಿ ಆಭರಣದ ನಿಖರ ಅಥವಾ ಸಮೀಪದ ಬೆಲೆ ತಿಳಿಸಿದ ವೀಕ್ಷಕರು ಅದೃಷ್ಟಶಾಲಿಗಳಾಗಿ ವಿಜೇತರಾಗಲಿದ್ದಾರೆ. ವಿಜೇತರಿಗೆ ಆಕರ್ಷಕ ಉಡುಗೊರೆ ಮಂಗಳೂರು ಜ್ಯುವೆಲ್ಸ್ ವತಿಯಿಂದ ಲಭಿಸಲಿದೆ. ಈ ಮೂಲಕ ಚಿನ್ನ-ಬೆಳ್ಳಿ, ವಜ್ರದ ಆಭರಣ ಪ್ರಿಯರಿಗೆ ಅತ್ಯಪೂರ್ವ ಅವಕಾಶವನ್ನು ಮಂಗಳೂರು ಜ್ಯುವೆಲ್ಸ್ ಒದಗಿಸಿದೆ. ವೀಕ್ಷಕರು ನೇರಪ್ರಸಾರದಲ್ಲಿ ಕರೆ ಮಾಡಬೇಕಾದ ಸಂಖ್ಯೆ: 8147916465

1 COMMENT

LEAVE A REPLY

Please enter your comment!
Please enter your name here