






ಪುತ್ತೂರು: ಪುತ್ತೂರು ಹೃದಯಭಾಗದಲ್ಲಿರುವ ರೈಲ್ವೇ ನಿಲ್ದಾಣಕ್ಕೆ ತೆರಳುವ ನೆಲ್ಲಿಕಟ್ಟೆ ರಸ್ತೆಯಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಸರಬರಾಜು ಪೈಪ್ ಒಡೆದು ನೀರು ಪೋಲಾಗುತ್ತಿದೆ. ನಗರಸಭೆಯ ಜಲಸಿರಿ ವಿಭಾಗ ಜಾಣಕುರುಡಿನಂತೆ ಸುಮ್ಮನಿದೆ.


ಪುತ್ತೂರು ಹಳೆ ಬಜಾರ್ ಪೋಸ್ಟ್ ಆಫೀಸ್‌ನ ಕಟ್ಟಡದ ಬಳಿಯಿಂದ ರೈಲ್ವೇ ನಿಲ್ದಾಣಕ್ಕೆ ತೆರಳುವ ನೆಲ್ಲಿಕಟ್ಟೆ ರಸ್ತೆಯಲ್ಲಿ ಪೈಪ್ ಒಡೆದು ನೀರು ಪೋಲಾಗುತ್ತಿರುವ ಮತ್ತು ನಿಂತ ನೀರಿನಿಂದ ಸೊಳ್ಳೆ ಉತ್ಪತಿಯಾಗಿ ಸಾಂಕ್ರಾಮೀಕ ರೋಗ ಹರಡುವ ಭೀತಿ ಎದುರಾಗಿರುವ ಕುರಿತು ಎಪ್ರಿಲ್ ತಿಂಗಳಲ್ಲೇ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ಆದರೆ ನಗರಸಭೆ ಇತ್ತ ಕಡೆ ಗಮನ ಹರಿಸದೆ ದಿವ್ಯ ನಿರ್ಲಕ್ಷ್ಯ ಮಾಡಿದೆ. ಇದೀಗ ತಿಂಗಳು ಕಳೆದರೂ ಇನ್ನೂ ದುರಸ್ಥಿಗೆ ಮುಂದಾಗಿಲ್ಲ. ಒಂದು ನಗರಸಭೆ ಆಡಳಿತವೂ ಇಲ್ಲ. ಇನ್ನೊಂದು ಕಡೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದರೂ ಅವರ ಗಮನಕ್ಕೂ ಬಾರದಿರಬಹುದು. ಆದರೆ ನಗರಸಭೆ ಅಧಿಕಾರಿಗಳು ಗೊತ್ತಿದ್ದರೂ ಮೌನತಾಳಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.













