






ಪುತ್ತೂರು:ವಿದ್ಯುತ್ ಸರಬರಾಜು ಮಾಡುವ ತಂತಿ ಎಳೆಯುವ ಕಾಮಗಾರಿ ನೋಡಿಕೊಳ್ಳುತ್ತಿದ್ದ ಕಾಣಿಯೂರು ಗ್ರಾಮದ ಪುಣ್ಚತ್ತಾರಿನ ನಿವಾಸಿಯೊಬ್ಬರು ಹೆಂಡತಿ ಮನೆಯಿಂದ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿರುವ ಕುರಿತು ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಕಾಣಿಯೂರು ಗ್ರಾಮದ ಪುಣ್ಚತ್ತಾರು ನಿವಾಸಿಯಾಗಿದ್ದು ಮಂಗಳೂರಿನಲ್ಲಿ ಆದಿತ್ಯ ಟ್ರೇಡಿಂಗ್ ಸೊಲ್ಯೂಷನ್ನಲ್ಲಿ ಟ್ರೇಡಿಂಗ್ ಕೆಲಸದ ಜೊತೆಗೆ ಪಾರ್ಟ್ ಟೈಮ್ ನೆಲೆಯಲ್ಲಿ ಎಸ್.ಎಲ್.ವಿ ಕಂಪೆನಿಯ ನಂಜುಂಡಿ ಟ್ರೇಡರ್‌ನಲ್ಲಿ ಕಾಂಟ್ರಾಕ್ಟ್ ವಹಿಸಿಕೊಂಡಿರುವ ವಿದ್ಯುತ್ ಸರಬರಾಜು ಮಾಡುವ ತಂತಿ ಎಳೆಯುವ ಕಾಮಗಾರಿಯ ಮೇಲುಸ್ತುವಾರಿ ನೋಡುವ ಕೆಲಸ ಮಾಡುತ್ತಿರುವ ವಿನಯ್ (43)ರವರು ನಾಪತ್ತೆಯಾದವರು.



ಅವರು ಕೆಮ್ಮಿಂಜೆ ಗ್ರಾಮದ ನೈತ್ತಾಡಿಯಲ್ಲಿರುವ ಪತ್ನಿ ಮನೆಯಿಂದ ಮೇ 10ರಂದು ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆ.ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ.ನಾಪತ್ತೆಯಾದ ವಿನಯ್ ಅವರ ಕುರಿತು ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭಿಸದೇ ಇದ್ದ ಹಿನ್ನೆಲೆಯಲ್ಲಿ ಅವರ ಪತ್ನಿ ಭವ್ಯ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.










