ಗಂಡಿಬಾಗಿಲು ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ಉಪ್ಪಿನಂಗಡಿ: ತ್ಯಾಗ, ಬಲಿದಾನ, ಐಕ್ಯತೆಯ ಸಂಕೇತವನ್ನು ಪ್ರತಿಪಾದಿಸುವ “ಈದುಲ್-ಅದ್ಹಾ” ಪವಿತ್ರ ಬಕ್ರೀದ್ ಹಬ್ಬವನ್ನು ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ಮೇ ೨೮ರಂದು ಆಚರಿಸಲಾಯಿತು. ಗಂಡಿಬಾಗಿಲು ಮಸೀದಿಯಲ್ಲಿ ಕುತುಬಿಯಾ ಜುಮಾ ಮಸೀದಿ ಖತೀಬ್ ಇಲ್ಯಾಸ್ ಅರ್ಶದಿ ಕುಂಡಾಜೆ ಹಬ್ಬದ ಸಂದೇಶ ನೀಡಿದರು. ಹಿರಿಯರು, ಕಿರಿಯರೆನ್ನದೆ ಹೊಸ ಬಟ್ಟೆ ಧರಿಸಿದ ಮುಸ್ಲಿಂ ಬಾಂಧವರು ನಮಾಜು, ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

LEAVE A REPLY

Please enter your comment!
Please enter your name here