






ಪುತ್ತೂರು: ಕವಯತ್ರಿ ಫ್ಲಾವಿಯಾ ಅಲ್ಬುಕರ್ಕ್ ಪುತ್ತೂರು ಅವರ “ಸಖಿ ಸೂಸಿದ ಸೌಗಂಧ” ಕವನ ಸಂಕಲನಕ್ಕೆ ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕಥೋಲಿಕ್ ಸಭಾ ಉಡುಪಿ ಪ್ರದೇಶ ಇವರ ಜಂಟಿ ಆಶ್ರಯದಲ್ಲಿ ನೀಡುವ ರಾಜ್ಯಮಟ್ಟದ ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ-2025 ಲಭಿಸಿದೆ


ಪ್ರಶಸ್ತಿಯು 25000ರೂ. ನಗದು, ಸ್ಮರಣಿಕೆಯನ್ನು ಹೊಂದಿದ್ದು ಜೂ.14ರಂದು ಬೆಳಿಗ್ಗೆ 10 ಗಂಟೆಗೆ ಶಿರ್ವ ಆರೋಗ್ಯ ಮಾತಾ ಚರ್ಚ್‌ನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪುರಸ್ಕಾರ ಸಮಿತಿಯ ಆಲ್ಫೋನ್ಸ್ ಡಿಕೋಸ್ತಾ ತಿಳಿಸಿದ್ದಾರೆ. ಪುತ್ತೂರು ನಿವಾಸಿ, ಮಾಯ್ ದೆ ದೇವುಸ್ ಶಾಲಾ ಶಿಕ್ಷಕಿಯಾಗಿರುವ ಫ್ಲಾವಿಯಾ ಅಲ್ಬುಕರ್ಕ್ ಅವರು ಕನ್ನಡ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದವರಾಗಿದ್ದಾರೆ.













