ಬೆಟ್ಟಂಪಾಡಿ: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರಂಭೋತ್ಸವ, ವಿಜ್ಞಾನ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ

0

ಬೆಟ್ಟಂಪಾಡಿ: ವಿದ್ಯಾಗಿರಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.1 ಸೋಮವಾರ ಶಾಲಾ ಆರಂಭೋತ್ಸವ ಸ್ವಾಗತ ಕಾರ್ಯಕ್ರಮ ಹಾಗೂ ವಿಜ್ಞಾನ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು.

ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಶಶಿಕುಮಾರ್ ತೆಂಗಿನಕಾಯಿ ಒಡೆಯುವುದರ ಮೂಲಕ ವಿಜ್ಞಾನ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನಡೆಸಿದರು. ಆರು ತಿಂಗಳೊಳಗೆ ಪ್ರಯೋಗಾಲಯದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿ ಎಂದು ಆಶಿಸಿದರು.ಸಭಾ ಕಾರ್ಯಕ್ರಮದಲ್ಲಿ ಪೋಷಕರಾದ ರಾಜೇಶ್ವರಿ, ಸತ್ಯನಾರಾಯಣ ಪುಣೆ ಚಿತ್ತಾಯ, ಆದಿತ್ಯ ಘಾಟೆ ಶಾಲೆಯ ಬಗೆಗಿನ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಕ್ಷಕ ಸಂಘದ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಅನಿಲ್ ಕುಮಾರ್ ಕನ್ನಡ್ಕ ಆಯ್ಕೆಯಾದರು. ಆಡಳಿತ ಮಂಡಳಿ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಕೊಮ್ಮಂಡ ಶುಭ ಹಾರೈಸಿದರು.ಮಾಜಿ ಅಧ್ಯಕ್ಷ ಪ್ರಕಾಶ್ ರೈ ಬೈಲಾಡಿ ಸೇವಾ ಅವಧಿಯ ಅನುಭವ ಹಂಚಿಕೊಂಡು ಶಾಲೆಯ ಸೇವೆಯನ್ನು ಶ್ಲಾಘಿಸಿದರು. ಶ್ರೀರಂಗನಾಥ ರೈ ಗುತ್ತು ಅಧ್ಯಕ್ಷೀಯ ನುಡಿಗಳಲ್ಲಿ ಹೊಸ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಮುಖ್ಯಗುರು ರಾಜೇಶ್ ಎನ್ ಸ್ವಾಗತಿಸಿದರು. ಸಹ ಶಿಕ್ಷಕಿ ಭಾಗ್ಯಶ್ರೀ ವಂದಿಸಿದರು. ರಕ್ಷಿತಾ ಮಾತಾಜಿ ನಿರೂಪಿಸಿದರು.ವೈದಿಕ ಕಾರ್ಯಕ್ರಮ: ಅರ್ಚಕ ವೇದಮೂರ್ತಿ ರಾಧಾಕೃಷ್ಣ ಭಟ್ ಕಕ್ಕೂರು ಗಣಪತಿ ಹವನ ಹಾಗೂ ಅಗ್ನಿಹೋತ್ರ ನಡೆಸಿಕೊಟ್ಟರು. ನೂತನ ವಿದ್ಯಾರ್ಥಿಗಳು ಮತ್ತು ಪೋಷಕರು ಅಗ್ನಿಹೋತ್ರಕ್ಕೆ ಸಮಿತ್ತು ಸಮರ್ಪಿಸಿದರು. ನೂತನ ಪೋಷಕರಿಗೆ ವಿದ್ಯಾಭಾರತಿ ಭಾವಚಿತ್ರ ಹಾಗೂ ಭಗವದ್ಗೀತಾ ಪುಸ್ತಕ ನೀಡಿ ಸ್ವಾಗತಿಸಲಾಯಿತು.ರೋಬೋಟಿಕ್ ಮಾಹಿತಿ: ಡ್ರಿಂಕಿಟ್ ಸಂಸ್ಥೆಯ ಸಂಸ್ಥಾಪಕ ಆಕರ್ಷ್ ಶೆಟ್ಟಿ ರೋಬೋಟಿಕ್ ಕ್ಲಾಸ್ ಬಗ್ಗೆ ಮಾಹಿತಿ ನೀಡಿದರು. ಗ್ರಾಮೀಣ ಮಕ್ಕಳನ್ನು ನಗರದ ಮಕ್ಕಳಂತೆ ಕ್ರಿಯಾಶೀಲರನ್ನಾಗಿ ಮಾಡುವುದು, ಮಕ್ಕಳ ವಯಸ್ಸು ಮತ್ತು ಆಲೋಚನೆಗೆ ಅನುಸಾರವಾಗಿ ಅವಕಾಶ ಒದಗಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.ಮೆರವಣಿಗೆ: ನೂತನ ವಿದ್ಯಾರ್ಥಿಗಳನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಮಾತಾಜಿಯವರು ಅರಿಶಿನ-ಕುಂಕುಮ ಹಚ್ಚಿ ಆರತಿ ಬೆಳಗಿ ಶುಭ ಕೋರಿದರು.

LEAVE A REPLY

Please enter your comment!
Please enter your name here