






ಪುತ್ತೂರು:ಪುತ್ತೂರಿನಿಂದ ತಂಬುತ್ತಡ್ಕ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಚಿನ್ನದ ಕರಿಮಣಿ ಸರ ಮತ್ತು ಬ್ಯಾಗ್ನಲ್ಲಿದ್ದ ನಗದು ಕಳವು ಮಾಡಿರುವ ಘಟನೆ ವರದಿಯಾಗಿದೆ.


ಆರ್ಯಾಪು ಗ್ರಾಮದ ಮಣಿಪದವು ನಿವಾಸಿ ಜಯಮ್ಮ ಎಸ್ ಅವರ 22 ಗ್ರಾಂ ತೂಕದ ಕರಿಮಣಿ ಸರ ಮತ್ತ ಬ್ಯಾಗ್ನಲ್ಲಿದ್ದ 5 ಸಾವಿರ ನಗದು ಕಳವಾಗಿದೆ.ಮೇ 30ರಂದು ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತಂಬುತ್ತಡ್ಕ ಹೋಗುವ ಬಸ್ನಲ್ಲಿ ಪ್ರಯಾಣಿಸಿದ್ದು, ಮಣಿಪದವು ಬಸ್ ನಿಲ್ದಾಣದಲ್ಲಿ ಬಸ್ನಿಂದ ಇಳಿದು ನೋಡಿದಾಗ ಕುತ್ತಿಗೆಯಲ್ಲಿದ್ದ 22 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಕಳವಾಗಿತ್ತು. ಜೊತೆಗೆ ಬ್ಯಾಗ್ ಒಳಗೆ ಇಟ್ಟಿದ್ದ ರೂ.5 ಸಾವಿರವೂ ಕಳವಾಗಿತ್ತು ಎಂದು ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.













