







ನೆಲ್ಯಾಡಿ: ಉಡುಪಿಯ ಕಾಪುವಿನಲ್ಲಿ ನಡೆದ ವಲಯ 15ರ ಮಧ್ಯಂತರ ಸಮ್ಮೇಳನ ಸಂಗಮ ಕಾರ್ಯಕ್ರಮದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ’ಎಕ್ಸೆಲೆನ್ಸ್ ಅವಾರ್ಡ್’ ಹಾಗೂ ’ಗೋಲ್ಡನ್ ಸ್ಟಾರ್ ಪ್ರೆಸಿಡೆಂಟ್’ ಪ್ರಶಸ್ತಿ ಲಭಿಸಿದೆ.



ಘಟಕದ ಧನಾತ್ಮಕ ಬೆಳವಣಿಗೆ, ಎಲ್‌ಡಿಎಂಟಿ, ವಲಯ ಉಪಾಧ್ಯಕ್ಷರ ಮೊದಲ ಭೇಟಿ, ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಯೋಜನೆ, ಎನ್‌ಎಸ್‌ಎಸ್ ಕಾರ್ಯಕ್ರಮ ಮತ್ತು ವಲಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಸೇರಿದಂತೆ ಘಟಕದ ವಿವಿಧ ಕಾರ್ಯಕ್ರಮಗಳನ್ನು ಗುರುತಿಸಿ ಪ್ರಶಸ್ತಿಗಳು ದೊರೆತಿದೆ. ಇದಲ್ಲದೆ ಜೆಸಿಐ ಇಂಡಿಯಾದ ಪಿಆರ್ ಹಾಗೂ ಮಾರ್ಕೆಟಿಂಗ್ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದುಕೊಂಡಿದೆ. ಈ ವಲಯ ಕಾರ್ಯಕ್ರಮದ ವೇದಿಕೆಯಲ್ಲಿ ಘಟಕ ಪತ್ರಿಕೆ ಕಪಿಲಾವಾಣಿಯ ಮೊದಲ ಸಂಚಿಕೆಯನ್ನು ವಲಯಾಧ್ಯಕ್ಷರಾದ ಸಂತೋಷ್ ಶೆಟ್ಟಿ ಬಿಡುಗಡೆ ಮಾಡಿದರು.




ಇದೇ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷರಾದ ಕಾಶೀನಾಥ್ ಗೋಗಟೆ, ವಲಯ ಉಪಾಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ, ಜೆಸಿಐ ಕೊಕ್ಕಡ ಕಪಿಲಾ ಘಟಕದ ಅಧ್ಯಕ್ಷರಾದ ರಿತೇಶ್ ಎಂ ಸ್ಟ್ರೆಲ್ಲಾ, ಕಾರ್ಯದರ್ಶಿ ಜೋಯಲ್ ಪಿರೇರಾ, ಕಪಿಲಾವಾಣಿ ಸಂಪಾದಕರಾದ ಜಸ್ವಂತ್ ಪಿರೇರಾ, ನಿಕಟಪೂರ್ವಾಧ್ಯಕ್ಷರಾದ ಡಾ.ಶೋಭಾ ಪಿ, ಪೂರ್ವಾಧ್ಯಕ್ಷರಾದ ಸಂತೋಷ್ ಜೈನ್, ಪೂರ್ವಾಧ್ಯಕ್ಷರಾದ ಕೆ.ಶ್ರೀಧರ ರಾವ್, ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ ಮತ್ತು ದಕ್ಷ ಜೈನ್ ಅವರು ಉಪಸ್ಥಿತರಿದ್ದರು.










