







ರಾಮಕುಂಜ: ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರ್ರಾಷ್ಟ್ರೀಯ ಮುಕ್ತ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮಂಗಳೂರು ಶಾರದಾ ವಿದ್ಯಾನಿಕೇತನ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಚಿನ್ಮಯ್ ಬಿ.ಆರ್. ಚಿನ್ನದ ಪದಕ ಪಡೆದುಕೊಂಡಿದ್ದಾರೆ.


14 ವರ್ಷದೊಳಗಿನ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಚಿನ್ಮಯ್‌ಗೆ ಚಿನ್ನದ ಪದಕ ಲಭಿಸಿದೆ. ಕ್ರೀಡಾಕೂಟ ಮೇ.29 ರಿಂದ ಜೂ.1ರ ತನಕ ನಡೆಯಿತು. ಇವರಿಗೆ ತರಬೇತುದಾರರಾದ ಡಾ.ಗುರುರಾಜ್ ಇಟಗಿ, ವ್ಯವಸ್ಥಾಪಕಿ ದೀಪಾಶಂಕರ್ ಅವರು ಮಾರ್ಗದರ್ಶನ ನೀಡಿದ್ದರು. ಚಿನ್ಮಯ್ ರಾಮಕುಂಜ ಗ್ರಾಮದ ಅಂಬುಡೇಲು ನಿವಾಸಿ, ಬೆಂಗಳೂರಿನ ಎನ್‌ಎಎಲ್‌ನಲ್ಲಿ ಉದ್ಯೋಗಿಯಾಗಿರುವ ರತ್ನಾಕರ್ ಹಾಗೂ ಬೆಂಗಳೂರಿನಲ್ಲಿ ಬಿಇಎಲ್‌ನಲ್ಲಿ ಉದ್ಯೋಗಿಯಾಗಿರುವ ನಿರ್ಮಲಾ ದಂಪತಿ ಪುತ್ರ.













