ಅಗ್ನಿವೀರ್ ಆಗಿ ಕೊೖಲದ ಸಂದೇಶ್ ಆಯ್ಕೆ

0

ರಾಮಕುಂಜ: ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ.ವಿದ್ಯಾರ್ಥಿ, ಕಡಬ ತಾಲೂಕಿನ ಕೊೖಲ ಗ್ರಾಮದ ನಿವಾಸಿ ಸಂದೇಶ್ ಅವರು ಭಾರತೀಯ ಭೂ ಸೇನೆಗೆ ಅಗ್ನಿವೀರ್ ಆಯ್ಕೆ ಆಯ್ಕೆಗೊಂಡಿದ್ದಾರೆ.


ಸಂದೇಶ್ ಅವರು  ಕೊೖಲ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಪ್ರಸ್ತುತ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ.ವ್ಯಾಸಂಗ ಮಾಡುತ್ತಿದ್ದಾರೆ. ಇವರು ಎನ್‌ಸಿಸಿಯಲ್ಲೂ ಗುರುತಿಸಿಕೊಂಡಿದ್ದಾರೆ. ಈತ ಕೊೖಲ ನಿವಾಸಿ ತನಿಯಪ್ಪ ಗೌಡ ಹಾಗೂ ಲಕ್ಷ್ಮೀ ದಂಪತಿ ಪುತ್ರ.

LEAVE A REPLY

Please enter your comment!
Please enter your name here