ಕಲಿಯುವ ಜತೆಗೆ ಆದಾಯ ಗಳಿಸಿ : ನಾಳೆ ಕಡಬ ಹೊಸಮಠದಲ್ಲಿ ನೇರ ಸಂದರ್ಶನ ಮೂಲಕ ನೇಮಕಾತಿ

0

ಕಡಬ: ಕಡಬ ತಾಲೂಕಿನ ಬಲ್ಯ ಗ್ರಾಮದ ಹೊಸಮಠ ಸೇತುವೆ ಬಳಿಯಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜೂ.7 ರಂದು ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಸ್ಟಡಿಸ್ ಕಂಪೆನಿಯಿಂದ ನೇರ ಸಂದರ್ಶನದ ಮೂಲಕ, ಬ್ಯಾಚುಲರ್ ಫಾರ್ಮಾಸ್ಕೂಟಿಕಲ್ ಮ್ಯಾನುಫ್ಯಾಕ್ಟರಿಂಗ್ ಟೆಕ್ನಾಲಜಿಯಲ್ಲಿ ಉಚಿತ ವಸತಿ ಊಟ ಸೇರಿದಂತೆ ಆಕರ್ಷಕ ಮಾಸಿಕ ಶಿಷ್ಯ ವೇತನದೊಂದಿಗೆ 4 ವರ್ಷಗಳ ಪದವಿ ವಿದ್ಯಾಬ್ಯಾಸಕ್ಕಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಪಿಯುಸಿ ಉತ್ತೀರ್ಣ, ಬಿ.ಎ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಡಿಪ್ಲೊಮಾ ಪೂರ್ಣಗೊಳಿಸಿದ 18-22 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಪ್ಟಿಟ್ಯೂಡ್ ಪರೀಕ್ಷೆ, ಮನೋವೈಜ್ಞಾನಿಕ ನಿರ್ಣಯ ಪರೀಕ್ಷೆ, ನ್ಯೂರೋ ಮಸ್ಕ್ಯುಲರ್ ಪರೀಕ್ಷೆ, ಗುಂಪು ಚಟುಟವಟಿಕೆಯ ಪ್ಯಾನಲ್ ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡು, ಪಾಸ್‌ಪೋರ್ಟು ಫೋಟೊ, ಬಯೋಡಾಟ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ888408666 ಅಥವಾ 9036263305ನ್ನು ಸಂಪರ್ಕಿಸಬಹುದಾಗಿದೆ.

ರಿಜಿಸ್ಟೇಷನ್ ಗಾಗಿ ಈ ಕೆಳಗಿರುವ ಸ್ಕ್ಯಾನರ್ ಅನ್ನು ಬಳಸಬಹುದಾಗಿದೆ.

LEAVE A REPLY

Please enter your comment!
Please enter your name here