







ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆ ರೈಲ್ವೇ ಅಂಡರ್ ಪಾಸ್ ತಿರುವಿನಲ್ಲಿ ಗೂಡ್ಸ್ ಲಾರಿಯೊಂದು ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಘಟನೆ ಜೂ.9 ರ ನಸುಕಿನ ಜಾವ ನಡೆದ ಬಗ್ಗೆ ವರದಿಯಾಗಿದೆ.


ಪುತ್ತೂರು ಎಪಿಎಂಸಿ ರಸ್ತೆಯಾಗಿ ಉಪ್ಪಿನಂಗಡಿ ಕಡೆ ಹೋಗುತ್ತಿದ್ದ ಗೂಡ್ಸ್ ಲಾರಿ ( ಎಸ್ ಎಲ್ ವಿ ಟ್ರಾನ್ಸ್ ಪೋರ್ಟ್) ಎಪಿಎಂಸಿ ರೈಲ್ವೇ ಅಂಡರ್ ಪಾಸ್ ತಿರುವಿವಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಚಲಿಸಿ ಅಪಘಾತಗೊಂಡಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಲಾರಿ ಹಾನಿಗೀಡಾಗಿದೆ.













