







ನೆಲ್ಯಾಡಿ:ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ಮಹಾಸಭೆ ರವಿಪ್ರಸಾದ್ ಆಚಾರ್ ಪಂಜಿಕಂಡ ಅವರ ಮನೆಯಲ್ಲಿ ಜೂ.೦7ರಂದು ನಡೆಯಿತು.ವಲಯದ ಅಧ್ಯಕ್ಷ ರಾಜೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇದೇ ಸಂದರ್ಭ ನಡೆಯಿತು.


ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಹರಿಪ್ರಸಾದ್ ಭಟ್, ಕಾರ್ಯದರ್ಶಿಯಾಗಿ ರವೀಂದ್ರ ಮಾಸ್ಟರ್ ಹಾಗೂ ತಾಲೂಕು ಪ್ರತಿನಿಧಿಯಾಗಿ ಸತೀಶ್ ಮೂಡಂಬಡಿತ್ತಾಯ ದುರ್ಗಾಶ್ರೀ’ ಆಯ್ಕೆಯಾದರು.ಉಪಾಧ್ಯಕ್ಷರಾಗಿ ರಾಧಾಕೃಷ್ಣ ಬಿ.ಕೆ., ಡಾ.ಮುರಳೀಧರ ಹಾಗೂ ಸುಕುಮಾರ ಎಡಪಡಿತ್ತಾಯ, ಕೋಶಾಧಿಕಾರಿಯಾಗಿ ಆರ್.ವೆಂಕಟರಮಣ, ಜೊತೆ ಕಾರ್ಯದರ್ಶಿಯಾಗಿ ಧನಲಕ್ಷ್ಮೀ ಬಾಳ್ತಿಲ್ಲಾಯ ಕುಂಡಡ್ಕ ಆಯ್ಕೆಯಾದರು. ನಿರ್ದೇಶಕರಾಗಿ ರವಿಪ್ರಸಾದ್ ಆಚಾರ್, ಡಾ.ಸುಬ್ರಹ್ಮಣ್ಯ ಶಬರಾಯ, ವಿದ್ವಾನ್ ಶ್ರೀಕಾಂತ ಕುಂಜಹ್ನ್ಣಾಯ ಹಾಗೂ ಪುರೋಹಿತ್ ರಾಧಾಕೃಷ್ಣ ಜೋಗಿತ್ತಾಯ ಆಯ್ಕೆಯಾದರು.



ಗೌರವಾಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್, ಮಹಿಳಾ ಸಂಪದ ಅಧ್ಯಕ್ಷೆಯಾಗಿ ಶಶಿಕಲಾ ಶಬರಾಯ ಹಾಗೂ ಕಾರ್ಯದರ್ಶಿಯಾಗಿ ಗೀತಾ ಪಂಜಿಕಂಡ ಆಯ್ಕೆಯಾದರು.ಯುವ ಸಂಪದದ ಅಧ್ಯಕ್ಷರಾಗಿ ಪುರೋಹಿತ ಆದಿತ್ಯ ಪಿ.ವಿ.ಆಯ್ಕೆಯಾದರು. ಕಾರ್ಯಕ್ರಮದ ಆರಂಭದಲ್ಲಿ ವಲಯದ ಸದಸ್ಯರೆಲ್ಲರೂ ಸಾಮೂಹಿಕವಾಗಿ ಶ್ರೀ ವಿಷ್ಣುಸಹಸ್ರನಾಮ ಪಠಿಸಿದರು.ಶ್ರೇಯಸ್ದುರ್ಗಾಶ್ರೀ’ರವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭಗೊಂಡಿತು. ಗೀತಾ ಆಚಾರ್ ಪಂಜಿಕಂಡ ನೀತಿ ಸಂಹಿತೆ ವಾಚಿಸಿದರು.ತಾಲೂಕು ಪ್ರತಿನಿಧಿ ಸತೀಶ್ ಮೂಡಂಬಡಿತ್ತಾಯ `ದುರ್ಗಾಶ್ರೀ’ ಅವರು ಕಳೆದ ಸಾಲಿನ ಕಾರ್ಯಕ್ರಮಗಳು, ವಿತ್ತೀಯ ನಿರ್ವಹಣೆ ಹಾಗೂ ಸಭೆಯ ಉದ್ದೇಶಗಳನ್ನು ವಿವರಿಸಿದರು.
ಪುತ್ತೂರು ತಾಲೂಕು ಶಿವಳ್ಳಿ ಸಂಪದದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ, ವಲಯದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ಅವರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು.ನಿಕಟಪೂರ್ವ ಅಧ್ಯಕ್ಷ ರಾಜೇಶ್ ಭಟ್ ಸ್ವಾಗತಿಸಿದರು.ನಿಕಟಪೂರ್ವ ಕಾರ್ಯದರ್ಶಿ ಆದಿತ್ಯ ಟಿ.ವಿ.ವಂದಿಸಿದರು.ಸಭೆಯ ಪ್ರಾಯೋಜಕರಾದ ಪಂಜಿಕಂಡ ಮನೆಯವರು ಆತಿಥ್ಯ ನೀಡಿ ಸಹಕರಿಸಿದರು.










