ಡಾ. ವೆಂಕಟ್ರಮಣ ಭಟ್ ಬಡೆಕ್ಕಿಲ ನಿಧನ

0

ಪುತ್ತೂರು:ಇಲ್ಲಿನ ಉರ್ಲಾಂಡಿ ನಿವಾಸಿ ಡಾ.ವೆಂಕಟ್ರಮಣ ಭಟ್ (75ವ)ಬಡೆಕ್ಕಿಲ ಅವರು ಜೂ.9ರಂದು ಬೆಳಗ್ಗೆ ನಿಧನರಾದರು.


ದಿ.ಬಡೆಕ್ಕಿಲ ಡಾ.ರಾಮ ಭಟ್ ಮತ್ತು ದಿ. ಕಮಲ ದಂಪತಿಯ ಪುತ್ರ ಡಾ.ವೆಂಕಟ್ರಮಣ ಭಟ್ ಅವರು ಪುತ್ತೂರು ಮಹಿಳಾ ಪೊಲೀಸ್ ಸ್ಟೇಷನ್ ಬಳಿಯ ಹಳೆಯ ಕಟ್ಟಡದಲ್ಲಿ ಕ್ಲಿನಿಕ್ ಹೊಂದಿದ್ದರು.ಬಳಿಕ ಅಲ್ಲಿಂದ ಬಿಟ್ಟು ಮನೆಯಲ್ಲಿ ಮತ್ತು ಮೈಸೂರಿನಲ್ಲಿ ಕ್ಲಿನಿಕ್ ಹೊಂದಿದ್ದರು. ಅವರು 15ದಿನಕ್ಕೊಮ್ಮೆ ಮೈಸೂರಿಗೆ ಹೋಗಿ ಬರುತ್ತಿದ್ದರು.ಜೂ.9ರಂದು ಅವರು ನಿಧನರಾದರು. ಮೃತರು ಸಂಬಂಧಿಕರನ್ನು ಅಗಲಿದ್ದಾರೆ. ಇತ್ತೀಚೆಗೆ ಅವರು ಮೈಸೂರಿಗೆ ಹೋಗಿದ್ದ ಸಂದರ್ಭ ಅವರ ಮನೆಯಿಂದ ನಗದು ಕಳ್ಳತನವಾಗಿತ್ತು.ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

LEAVE A REPLY

Please enter your comment!
Please enter your name here