






ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಕುಂಬ್ರ ವಲಯದ ಜನಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜೂ 7ರಂದು ನಡೆಯಿತು.


ಹಾಲಿ ವಲಯಾಧ್ಯಕ್ಷರಾದ ಪ್ರಕಾಶ್ಚಂದ್ರ ರೈ ಕೈಕಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜೇಶ್ ರೈ ಪರ್ಪುಂಜ ಅವರನ್ನು ಕುಂಬ್ರ ವಲಯದ ನೂತನ ಜನಜಾಗೃತಿ ವಲಯಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.



ನೂತನ ಪದಾಧಿಕಾರಿಗಳ ವಿವರ:
ಕಾರ್ಯದರ್ಶಿಯಾಗಿ ಶಿವರಾಜ್ (ವಲಯ ಮೇಲ್ವಿಚಾರಕರು),ಉಪಾಧ್ಯಕ್ಷರಾಗಿ ಸಂದೀಪ್ ಆರ್ಯಾಪು,ಜೊತೆ ಕಾರ್ಯದರ್ಶಿಯಾಗಿ ರಾಜೀವಿ ಕುಂಬ್ರ,ಕೋಶಾಧಿಕಾರಿಯಾಗಿ ರೇಖಾನಾಥ ರೈ,ಸದಸ್ಯರುಗಳಾಗಿ ಸುಧಾಕರ್ ಕುಂಬ್ರ, ಪ್ರಕಾಶ್ಚಂದ್ರ ರೈ ಕೈಕಾರ, ದಾಮೋದರ ರೈರವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಅರುಣ್ ರೈ ಬಿಜಳ, ಕೃಷಿ ಅಧಿಕಾರಿ ಹರೀಶ್, ಮೇಲ್ವಿಚಾರಕಿ ಮೋಹಿನಿ, ವಿ.ಎಲ್.ಎ (VLA) ಸಂಧ್ಯಾ ಕುಕ್ಕಾಡಿ ಹಾಗೂ ಸೇವಾ ಪ್ರತಿನಿಧಿಗಳಾದ ಶಶಿಕಲಾ ಪಿ. ರೈ, ನಳಿನಿ, ರೇಖಾ, ವಿಶಾಲಾಕ್ಷಿ, ಜಯಂತಿ ಡಿ., ರಜನಿ, ಉಷಾ ಸೇರಿದಂತೆ ಹಲವರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ರಾಜೇಶ್ ರೈ ಪರ್ಪುಂಜ ಅವರ ಪರಿಚಯ
ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಜೇಶ್ ರೈ ಪರ್ಪುಂಜ ಅವರು, ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ
ಕುಂಬ್ರ ಶ್ರೀ ರಾಮ ಭಜನ ಮಂದಿರದ ಅಧ್ಯಕ್ಷರಾಗಿ, ಪರ್ಪುಂಜ ಸ್ನೇಹ ಯುವಕ ಮಂಡಲದ ಅಧ್ಯಕ್ಷರಾಗಿ, ಪರ್ಪುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಬ್ರ ಶನೈಶ್ಚರ ಪೂಜಾ ಸಮಿತಿ ಅಧ್ಯಕ್ಷರಾಗಿ, ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಅಭಿವೃದ್ಧಿ ಸಮಿತಿ ಸದಸ್ಯರಾಗಿ, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಬ್ರ ಒಕ್ಕೂಟದ ಅಧ್ಯಕ್ಷರಾಗಿ,ರಾಮಜಾಲು ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಸಾನಿಧ್ಯದ ಅಧ್ಯಕ್ಷರಾಗಿ, ಸ್ನೇಹ ಯುವಕ ಮಂಡಲ ಹಾಗೂ ಮಹಿಳಾ ಮಂಡಲ ಇದರ ಗೌರವ ಸಲಹೆಗಾರರಾಗಿ,ದ.ಕ.ಜಿ.ಪ. ಹ.ಪ್ರಾ ಶಾಲೆ ಪರ್ಪುಂಜ ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹಾಗೇ ಪ್ರಸ್ತುತ ಶ್ರೀ ಬ್ರಹ್ಮಬೈದರ್ಕಳ ಗರಡಿ ರಾಮಜಾಲು ಇದರ ಸಮಿತಿ ಸದಸ್ಯರಾಗಿ,, ಸಂಟ್ಯಾರು ಶ್ರೀ ವಿನಾಯಕ ಭಜನ ಮಂದಿರದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾಗಿ, ಸ್ಪಂದನ ಸೇವಾ ಬಳಗ ಕುಂಬ್ರ ಇದರ ಉಪಾಧ್ಯಕ್ಷರಾಗಿ, ವಿಜಯ ಸಾಮ್ರಾಟ್ ಪುತ್ತೂರು ಇದರ ಸಂಚಾಲಕರಾಗಿ, ಕೊರಗಜ್ಜ ಸೇವಾ ಸಮಿತಿ ಪರ್ಪುಂಜ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀ ನಾಗ ರಕ್ಷೇಶ್ವರಿ ಮತ್ತು ಗುಳಿಗ ಸಾನಿಧ್ಯ ಕೊಯಿಲತ್ತಡ್ಕ ಇದರ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜೇಶ್ ರೈ ಪರ್ಪುಂಜ ಅವರು ಸಮಾಜದ ಯಾವುದೇ ವರ್ಗದ ಜನರಿಗೆ ಕಷ್ಟದ ಸಮಯದಲ್ಲಿ ನೆರವಾಗಲು ಸದಾ ಮುಂಚೂಣಿಯಲ್ಲಿರುತ್ತಾರೆ. ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹಲವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಸ್ಥಳೀಯರಿಗೆ ಮಾದರಿಯಾಗಿವೆ. ಶಿಕ್ಷಣದ ಕಡೆಗೆ ವಿಶೇಷ ಕಾಳಜಿ ಹೊಂದಿರುವ ಅವರು, ಶಾಲಾಭಿವೃದ್ಧಿ ಸಮಿತಿಯ ಮೂಲಕ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ತಮ್ಮ ಕಾರ್ಯಕ್ಷಮತೆ ಮತ್ತು ಸೇವಾ ಮನೋಭಾವದಿಂದ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿರುವ ರಾಜೇಶ್ ರೈ ಪರ್ಪುಂಜ ಅವರು, ಸಮಾಜದ ಅಭಿವೃದ್ಧಿಗಾಗಿ ಸತತವಾಗಿ ಶ್ರಮಿಸುತ್ತಿದ್ದಾರೆ.










