ಫೇಸ್ ಬುಕ್ ಖಾತೆಯಲ್ಲಿ ಬಂಟ ಸಮಾಜದ ನಿಂದನೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಕಾವು ಹೇಮನಾಥ್ ಶೆಟ್ಟಿ ಪೊಲೀಸ್‌ ಇಲಾಖೆಗೆ ದೂರು

0

ಪುತ್ತೂರು: ಬಂಟ ಸಮಾಜ ಅವಿಭಜಿತ ದಕ್ಷಿಣ ಕನ್ನಡ , ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಪ್ರತಿಷ್ಠಿತ ಸಮಾಜ. ರಾಷ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸಮಾಜ. ದೇಶದ ಸಂವಿಧಾನ ವನ್ನು ಮೊದಲಾಗಿಯೇ ಸಂಸ್ಕೃತಿಯಲ್ಲಿ ಅಳವಡಿಸಿಕೊಂಡು ಜಾತ್ಯಾತೀತ ವ್ಯವಸ್ಥೆಯ ಮೂಲಕ ನಾಯಕತ್ವ ನೀಡಿದ, ಅತೀ ಹೆಚ್ಚು ವಿದ್ಯಾವಂತರನ್ನು, ವೈದ್ಯರನ್ನು, ಇಂಜಿನಿಯರ್ ಗಳನ್ನು, ಕಲಾವಿದರನ್ನು, ಉತ್ತಮ ರಾಜಕಾರಿಣಿಗಳನ್ನು, ಉದ್ಯಮಿಗಳನ್ನು, ಸಮಾಜಕ್ಕೆ ನೀಡಿದ ಜಾತಿ ನಮ್ಮದು.

ಇಂತಹ ಸಮಾಜದ ಅಸ್ತಿತ್ವನ್ನೇ ಪ್ರಶ್ನಿಸುವಂತೆ, ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ವೈಷ್ಯಮ್ಯ ಮತ್ತು ಧರ್ಮ ಮತ್ತು ಮತಗಳ ಮಧ್ಯೆ ಕೋಮು ಸಂಘರ್ಷ ಸೃಷ್ಟಿಯಾಗಲು ಕಾರಣವಾಗುವ ರೀತಿಯಲ್ಲಿ ಅನಿತಾ ಕಾಸರಗೋಡು ಎಂಬ ಫೇಸ್ ಬುಕ್ ಖಾತೆಯಲ್ಲಿ ಅವ್ಯಾಚ್ಯವಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವುದು ಬಂಟ ಸಮಾಜಕ್ಕೆ ತುಂಬಾ ನೋವಾಗಿದೆ. ಇಂತಹ ಮನೋಪ್ರವೃತ್ತಿಗೆ ಕಡಿವಾಣ ಹಾಕುವ ಅಗತ್ಯವಿದೆ. ಸಮಾಜದ ಸ್ವಾಸ್ತ್ಯ ಕೆಡಿಸುವ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿ, ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here